Showing posts with label ನೋಡಲೆ ಮಾನವ ಶ್ರೀಗುರುಚರಣವ mahadevapuravasa. Show all posts
Showing posts with label ನೋಡಲೆ ಮಾನವ ಶ್ರೀಗುರುಚರಣವ mahadevapuravasa. Show all posts

Thursday, 5 August 2021

ನೋಡಲೆ ಮಾನವ ಶ್ರೀಗುರುಚರಣವ ankita mahadevapuravasa

    ..

ನೋಡಲೆ ಮಾನವ ಶ್ರೀಗುರುಚರಣವ

ಮಾಡುತ ಪೂಜೆಯ ತೋಷದಲಿ ಪ


ಬೇಡುತ ನಿಜಸುಖ ಆಜ್ಞಾಚಕ್ರದೊ

ಳಾಡುತ ಪರಮನೆ ನೀನಾಗಿ ಅ.ಪ

ಸತ್ತು ಹುಟ್ಟಿ ಈ ಪೋಗುವದೇಹವ

ನಿತ್ಯವು ಎನ್ನುತ ಪೋಷಿಸದೆ

ಸತ್ಯಪ್ರಬಂಧವ ಶ್ರೀಹರಿಪಾದವ

ನೆತ್ತಿಲಿ ಪೊತ್ತರ ಮಗನಾಗಿ 1

ಚಿತ್ತವ ಚಲಿಸದೆಸಿದ್ದಾಪುರದೊಳ

ಗಿತ್ತರೆ ಬಂಧುರಸಿದ್ಧಿಗಳೂ

ಅರ್ಥಿಯಿಂದ ಬಂದೊದಗುವ ಫಲಗಳ

ವ್ಯರ್ಥವ ಮಾಡದೆ ಶೀಘ್ರದಲಿ 2

ಹರಿಯಜ ರುದ್ರರು ಈಶ ಸದಾಶಿವ

ಪರತರಮೂರ್ತಿಯ ಧ್ಯಾನಿಸುತ

ಗುರುವನೆ ಯಜಿಸುತ ಭಜಿಸುತ ಸರ್ವರು

ಗುರುವೇಯಾಗಿಹ ತೆರದಲ್ಲಿ 3

ತತ್ವಮಸಿಯ ಬೋಧಾಮೃತ ಸೇವಿಸಿ

ಮೃತ್ಯುವ ಜೇಸುತ ಧೈರ್ಯದಲಿ

ಪೃಥ್ವಿಯೊಳೀಮಹದೇವನಪುರದೊಳು

ಭಕ್ತರ ಪೊರೆಯುವ ದೊರೆಯನ್ನೆ 4

***


****