..
ನಿಂದೆ ಮಾಡುವಿ ಯಾತಕೋ | ಮಂದಮಾನವ ಶ್ರೀಗೋವಿಂದ
ದಾಸಾರ್ಯರನ್ನ ಎಂದೆಂದಿಗೀಮಾತು | ಇಂದಿರೇಶನ ಭಕುತ
ವೃಂದ ಮೆಚ್ಚುವದಿಲ್ಲವೋ ಮೂಢ ಪ
ಬಾಲತನದಾರಭ್ಯ ಶೀಲ ಸದ್ಭಕುತಿಯಲಿ ತಾಳ ತಂಬೂರಿ
ಪಿಡೆದು | ಶ್ರೀಲೋಲ ಹರಿನಾಮ ಹೇಳುತಲಿ
ಸತತ | ಗೋಪಾಳ ವೃತ್ತಿಯ ಮಾಡಿ ಕಾಲವನು ಕಳೆದವರು 1
ಕುಸುಮಶರನಟ್ಟುಳಿಗೆ ವಶವಾಗದಿರಿ ಎಂದು
ಉಸುರುತಲಿ ಶಿಷ್ಯಗಣಕೆ | ಅಸುರಾರಿ ಮಹಿಮೆಯನು
ರಸವತ್ ಕವಿತೆಯಲಿಂದ ನಿಶಿ ಹಗಲು
ವರ್ಣಿಸಿದ ಅಸಿಫ್ಯಾಳು ನಿಲಯರನು 2
ಆಶ ಕ್ರೋಧವ ತೊರೆದು ಕ್ಲೇಶ ಸುಖ ಸಮ ತಿಳಿದು
ಲೇಸಾಗಿ ಗುರುಸೇವೆಗೈದು ವಾಸಸ್ಥಾನಕೆ ತೆರಳಿದೀ
ಸುಗುಣರನು ವ್ಯರ್ಥ ನಿಂದೆ ಮಾಡುವಿ ಯಾಕೋ 3
***