Wednesday, 1 September 2021

ನಿಂದೆ ಮಾಡುವಿ ಯಾತಕೋ ankita shyamasundara hasigyalu govinda dasa stutih

..

ನಿಂದೆ ಮಾಡುವಿ ಯಾತಕೋ | ಮಂದಮಾನವ ಶ್ರೀಗೋವಿಂದ

ದಾಸಾರ್ಯರನ್ನ ಎಂದೆಂದಿಗೀಮಾತು | ಇಂದಿರೇಶನ ಭಕುತ

ವೃಂದ ಮೆಚ್ಚುವದಿಲ್ಲವೋ ಮೂಢ ಪ


ಬಾಲತನದಾರಭ್ಯ ಶೀಲ ಸದ್ಭಕುತಿಯಲಿ ತಾಳ ತಂಬೂರಿ

ಪಿಡೆದು | ಶ್ರೀಲೋಲ ಹರಿನಾಮ ಹೇಳುತಲಿ

ಸತತ | ಗೋಪಾಳ ವೃತ್ತಿಯ ಮಾಡಿ ಕಾಲವನು ಕಳೆದವರು 1


ಕುಸುಮಶರನಟ್ಟುಳಿಗೆ ವಶವಾಗದಿರಿ ಎಂದು

ಉಸುರುತಲಿ ಶಿಷ್ಯಗಣಕೆ | ಅಸುರಾರಿ ಮಹಿಮೆಯನು

ರಸವತ್ ಕವಿತೆಯಲಿಂದ ನಿಶಿ ಹಗಲು

ವರ್ಣಿಸಿದ ಅಸಿಫ್ಯಾಳು ನಿಲಯರನು 2


ಆಶ ಕ್ರೋಧವ ತೊರೆದು ಕ್ಲೇಶ ಸುಖ ಸಮ ತಿಳಿದು

ಲೇಸಾಗಿ ಗುರುಸೇವೆಗೈದು ವಾಸಸ್ಥಾನಕೆ ತೆರಳಿದೀ

ಸುಗುಣರನು ವ್ಯರ್ಥ ನಿಂದೆ ಮಾಡುವಿ ಯಾಕೋ 3

***

 

No comments:

Post a Comment