by ಪ್ರಸನ್ನವೆಂಕಟದಾಸರು
ನೀನೆಕರ್ತಎನ್ನಕರ್ತನಾ ನಿನ್ನಭೃತ್ಯಹಿತಮಾನಹಾನಿ ನಿನ್ನದಯ್ಯ ಕೊನೇರಿ ತಿಮ್ಮ ನಮ್ಮ್ಮಯ್ಯ ಪ.
ತನುಧನ ನೆಚ್ಚಿಕಿಲ್ಲಮಾನಿನಿತನ್ನವಳಲ್ಲಸೂನುಬಂಧುಗಳೆಲ್ಲ ಕ್ಷಣದವರಲ್ಲನಾನಾ ಜನ್ಮದಲಿ ಎನ್ನ ಪ್ರಾಣ ಕಿತ್ತೈಯ್ಯ ಚೈತನ್ಯದಾನವಾರಾತಿ ಕೃಷ್ಣಯ್ಯ ದೀನನ ಬಿಡದಿರಯ್ಯ 1
ಭವಾಂಧಕಾರದೊಳನುಭವಿಸಿ ಬೆಂಡಾಗುವೆನುವಿವರಿಸಿನಿತ್ಯಹಿತವ ಕಾಣೆನುಜಾವ ಒಂದದರೊಳರ್ಧ ದಾರಿಯಲಿ ಶ್ರೀಪಾದಭಾವಿಸಲೊಲ್ಲೆ ನೋಡಲವಗುಣಾಂಕಿತ ಮೂಢ 2
ಸ್ವಾಮಿ ನಿನ್ನ ಮುದ್ರಾಂಕನ ಮಾಡಿನ್ನನುಮಾನ್ಯಾಕೆಶ್ರೀಮಂತ ಭಾಗವತರ ಪ್ರೇಮಾನ್ವಿತರಶ್ರೀ ಮಧ್ವರಾಯರ ಸಿಕ್ಷಾನೇಮರಾಚರಣಾಧ್ಯಕ್ಷಸಾಮೀಪ್ಯ ಮುಕ್ತಿಯನೀಯೊ ನನ್ನ ಪ್ರಸನ್ವೆಂಕಟಯ್ಯ 3
****