Showing posts with label ನೀನೇ ಗತಿ ಕೃಷ್ಣಾ ಎನಗೆ ನೀನೆ ಗತಿ ಕೃಷ್ಣ prasannavenkata NEENE GATI KRISHNA ENAGE NEENE GATI KRISHNA. Show all posts
Showing posts with label ನೀನೇ ಗತಿ ಕೃಷ್ಣಾ ಎನಗೆ ನೀನೆ ಗತಿ ಕೃಷ್ಣ prasannavenkata NEENE GATI KRISHNA ENAGE NEENE GATI KRISHNA. Show all posts

Sunday, 5 December 2021

ನೀನೇ ಗತಿ ಕೃಷ್ಣಾ ಎನಗೆ ನೀನೆ ಗತಿ ಕೃಷ್ಣ ankita prasannavenkata NEENE GATI KRISHNA ENAGE NEENE GATI KRISHNA



ನೀನೆ ಗತಿ ಕೃಷ್ಣಾ ಎನಗೆ ನೀನೆ ಗತಿ ಕೃಷ್ಣ. ||ಪ||

ನೀನೆ ಗತಿಯೆಂದಾನತನಾಗಿ

ಮಾನಾಪಮಾನವ ನಿನಗೊಪ್ಪಿಸಿದೆ
ಜ್ಞಾನವಿಹೀನನ ಪಾವನಮಾಡಿ
ಶ್ರೀ ನರಹರಿ ಕರುಣಿಸೊ ನಮ್ಮಯ್ಯನೆ ||೧||

ತನುವಸ್ಥಿರ ಮನವತಿಚರ ಒದಗಿದ

ಧನ ನಶ್ವರ ನಿನ್ನಯ ಪಾದಾಬ್ಜದ
ನೆನವಿಗೆಯೊಂದನೆ ಕೊಡುಕಡೆ ಮೊದಲಿಗೆ
ಜನನವಸಾನದ ಬಳ್ಳಿಯ ಕಡಿಯಲು ||೨||

ಶರಣಾಗತ ಶರಣರಕರಪಿಡಿವಾ

ಬಿರುದಿನ ದೊರೆಗಿನ್ನನುಮಾನ್ಯಾಕೆ
ಪರಮಪತಿತನ ಪೂತನ ಮಾಡ್ಯು
ದ್ಧರಿಸುವ ಸಿರಿ ಪ್ರಸನ್ವೆಂಕಟ ಕೃಷ್ಣ. ||೩||
***


nIne gati kRuShNA enage nIne gati kRuShNa. ||pa||

nIne gatiyendAnatanAgi
mAnApamAnava ninagoppiside
j~jAnavihInana pAvanamADi
SrI narahari karuNiso nammayyane ||1||

tanuvasthira manavaticara odagida
dhana naSvara ninnaya pAdAbjada
nenavigeyondane koDukaDe modalige
jananavasAnada baLLiya kaDiyalu ||2||

SaraNAgata SaraNarakarapiDivA
birudina doreginnanumAnyAke
paramapatitana pUtana mADyu
ddharisuva siri prasanvenkaTa kRuShNa. ||3||
***

by ಪ್ರಸನ್ನವೆಂಕಟದಾಸರು
ನೀನೆಗತಿಕೃಷ್ಣ ಎನಗೆ ನೀನೆಗತಿಕೃಷ್ಣ ಪ.

ನೀನೆ ಗತಿಯೆಂದಾನತನಾಗಿಮಾನಾಪಮಾನವ ನಿನಗೊಪ್ಪಿಸಿದೆಜ್ಞಾನವಿಹೀನನ ಪಾವನ ಮಾಡಿಶ್ರೀನರಹರಿ ಕರುಣಿಸು ನಮ್ಮ್ಮಯ್ಯನೆ 1

ತನುವಸ್ಥಿರ ಮನವತಿಚರ ಒದಗಿದಧನ ನಶ್ವರ ನಿನ್ನಯ ಪಾದಾಬ್ಜದನೆನವಿಗೆಯೊಂದನೆ ಕೊಡು ಕಡೆ ಮೊದಲಿಗೆಜನನವಸಾನದ ಬಳ್ಳಿಯ ಕಡಿಯಲು 2

ಶರಣಾಗತ ಶರಣರ ಕರವಿಡಿವಬಿರುದಿನ ದೊರೆಗಿನ್ನನುಮಾನ್ಯಾಕೆಪರಮಪತಿತನ ಪೂತನ ಮಾಡ್ಯುದ್ಧರಿಸುವಸಿರಿಪ್ರಸನ್ನವೆಂಕಟಕೃಷ್ಣ3

********