ವಂದಿಪೆ ಯತಿವರೇಂದ್ರ ತವ ಪಾದದ್ವಂದ್ವಕ್ಕಾನಂದಾ ದಿನಾ
ಬಂದ ಕಂದನಾ ಪಾಲಿಸೆಂದೆ ಪ
ಮಂದಮತಿಯು ನಾ ನಿಂದ್ಯನಾಗಿ ಮಾಯಾಬಂಧನದೊಳು
ಸಿಲ್ಕಿರುವೆನಾ
ತಂದೆ ಸತ್ಯಜ್ಞಾನಾನಂದಮೂರ್ತಿ ಬಹು ನೊಂದೆನಾ
ಶರಣು ಬಂದೆನಾ 1
ಬೇಡ ಬಂದೆ ನಿನ್ನಾ ಕಾಡುವೆನೆಂದೆನ್ನಾ ದೂಡದೆ ಈ
ಮೂಢ ಸೇವಕನಾ
ಗಾಢ ಪಂಚಮುದ್ರೆ ನೀಡಿ ನೀ ಮಾಡಿಕೊ ದಾಸನಾ
ಬಿಡಿಸೊ ವ್ಯಸನಾ 2
ಶ್ರೀಶನಾದ ಹನುಮೇಶವಿಠಲನ್ನಾ ದಾಸ ಉದಾಸೀನದಲ್ಲೆ ಎನ್ನಾ
ಪೋಷಿಸೊ ನೀ ಮನದಾಸೆ ಪೂರೈಸಿನ್ನು ಕರುಣಾಜ್ಞಾನಪೂರ್ಣ 3
****