..
ಬಿಂಕವ್ಯಾತಕ್ಕೆನಮ್ಮ ಕೂಡ ಬಿಂಕವ್ಯಾತಕ್ಕೆಅಕಳಂಕ ರುಕ್ಮಿಣಿಯರಮನೆಗೆ ಅಹಂಕಾರದಲಿ ಮುಯ್ಯ ತಂದು ಪ.
ವಾತನೊಡಗೂಡಿ ಜನಿಸಿ ಆತನಮದುವೆ ಮಾಡಿಕೊಂಡೆನೀತಿಯೇನ ನಿನಗೆ ದ್ರೌಪತಿಈ ಮಾತು ಕೇಳಿ ಮಂದಿ ನಗರೆ 1
ಹುಟ್ಟು ಹೊಂದು ನಾರಿ ನೀನುಎಷ್ಟೊಂದು ಗರವು ನಮ್ಮ ಕೂಡಯಾಕೆ ಕೃಷ್ಣನ ಅರಸಿ ರುಕ್ಮಿಣಿಗೆಒಂದಿಷ್ಟರೆ ದೋಷ ತೋರ ಸಖಿಯೆ2
ಜನನ ಮರಣವೆಂಬೆರಡು ಜಾಣಿ ರುಕ್ಮಿಣಿಬಲ್ಲಳೇನ ಜನನಿ ಬೊಮ್ಮಗ ಎನಸಿತಾನೆ ಜಗದಿ ಖ್ಯಾತಿ ತುಂಬಿಲ್ಲವೇನ ಈ ಜಗದಿ ಖ್ಯಾತಿ ತುಂಬಿಲ್ಲವೇನ 3
ನಿತ್ಯ ಮುಕ್ತಳುನಿರ್ವಿಕಾರಳು ನಿತ್ಯ ನಿತ್ಯ ಜಗದುದ್ದಾರಳು ನಿತ್ಯ ಮೂರುತಿ ಕೃಷ್ಣನ ಭಜಿಸಿನಿತ್ಯ ತೃಪ್ತಳು ಎನಿಸುತಿಹಳು 4
ಅತ್ತಿಗೆಯರೆಂಬೊ ದಿವ್ಯ ಅರ್ಥನಾಮವ ಜಪಿಸಿಮತ್ತೆ ರಾಮೇಶನ ಅರಸಿಯರಿಬ್ಬರಭೃತ್ಯಳಾಗಿ ಭಾಗ್ಯವ ಪಡಿಯೆ5
****