..
kruti by ಲಕ್ಷ್ಮೀನಾರಯಣರಾಯರು Lakshminarayanaru
ಪರತರ ಕರುಣಾಕರ ವಿಧಿಮುಖ
ಸುರವರ ನುತಚರಣಯುಗ ಪಾಹಿ ಪ
ಭವಭಯಸಾಗರ ತರಣಿಯೆಂದೆನಿಸಿದೆ
ತವಪದ ಧ್ಯಾನವ ಸದಾ ಕೊಟ್ಟೆನ್ನನು 1
ತರಳನ ಬಾಧಿಪ ದುರಳನ ಸಭೆಯಲಿ
ನರಮೃಗ ರೂಪವ ತಾಳಿ ನೀ ಬಂದೆಯೋ 2
ಸಕಲ ಚರಾಚರದೊಳಗೆ ನೀನಿರುವುದು
ಪ್ರಕಟಿಸಿ ತೋರಿದೆ ಶ್ರೀಕಾಂತ ಶಾಶ್ವತ 3
***