ಆಚಾರ್ಯ ನಾಗರಾಜು ಹಾವೇರಿ " ವೆಂಕಟನಾಥ " ಮುದ್ರಿಕೆಯಲ್ಲಿ....
ವೇದವ್ಯಾಸ ಮಧ್ವರ
ವೊಲಿಮೆ ಪಡೆದ ।
ವಿದ್ಯಾ ವಾರಿಧಿ
ಸುತನಾಗಿ ಮೆರೆದ ।
ವಿದ್ಯಾ ಪ್ರಸನ್ನರಾಗಿ
ವ್ಯಾಸ ಪೀಠದಿ ವಿರಾಜಿಸಿ ।।
ವೇದವೇದ್ಯಮೂಲ
ಗೋಪಾಲಕೃಷ್ಣೋsಭಿನ್ನ
ವೇಂಕಟನಾಥನಾ ।
ರಾಧಕ ವಿದ್ಯಾ -
ಪಯೋನಿಧಿ
ತೀರ್ಥರ ತಂದೆ ನಮ್ಮ ।
ವಿದ್ಯಾ ಪ್ರಸನ್ನ ತೀರ್ಥ
ಹರಿದಾಸಾಗ್ರಣಿಗೆ
ನಮೋ ನಮೋ ।।
*****