Showing posts with label ಸುಂದರಿ ರಂಗನ ತಂದು ತೋರ ಒಂದರ ಘಳಿಗ್ಯಾಗೆ neleyadikeshava SUNDARI RANGANA TANDU TORA ONDARA GHALIGYAGE. Show all posts
Showing posts with label ಸುಂದರಿ ರಂಗನ ತಂದು ತೋರ ಒಂದರ ಘಳಿಗ್ಯಾಗೆ neleyadikeshava SUNDARI RANGANA TANDU TORA ONDARA GHALIGYAGE. Show all posts

Tuesday, 5 October 2021

ಸುಂದರಿ ರಂಗನ ತಂದು ತೋರ ಒಂದರ ಘಳಿಗ್ಯಾಗೆ ankita neleyadikeshava SUNDARI RANGANA TANDU TORA ONDARA GHALIGYAGE



ಸುಂದರಿ ರಂಗನ ತಂದು ತೋರ | 
ಒಂದರಘಳಿಗ್ಯಾಗೆ || ಪ ||

ಮತ್ಸ್ಯನಾಗಿ ಮೊದಲಿನಲ್ಲಿ | ಕೂರ್ಮನಾಗಿ ಕೊರೆನು ಕಾಯ್ದ |
ದೈತ್ಯರ ಕೊಂದ ಬಹು ಕ್ರೋಧದಿಂದ ದುರುಳ ಹಿರಣ್ಯಕನ ಕರುಳು ಬಗೆದು ತೋಡಿ
ಕೊರಳೊಳಗೆ ಧರಿಸಿದನು ಸರಗಳನ್ನೇ ಮಾಡಿ |
ಕೊರಳು ಕೊಯ್ದ ಎಲ್ಲಮ್ಮನ ಪುತ್ರನಾಗಿ ಕಾಯ್ದಿ ಸರಳ ಬಾಣವನ್ನೇ ಹೂಡಿ
ಲಂಕಾದ್ರಿ ಮಥನ ಮಾಡಿ ಎರಳ ಗಂಗೆಯರ ಪತಿವೃತೆಯರ ಕೆಡಿಸಿದನು ಕೂಡಿ |
ಮರಳು ತನದಿಂದ ಸೆಗೆದ ಹಯವನೇರಿ ಓಡಿ ||೧||

ನೀರೊಳು ಮೀನನಾಗಿ ಅಲೆವ | ಧರೆ ಭಾರವನ್ನು ಹೊರುವ |
ವರಹನಾಗಿ ನರಕಾಸುರನನು ತರೆವ ಕೋರೇಲಿ ಮಣ್ಣು ಬಗೆವ |
ಒಡೆ ಮುಡಿ ಕಂಬದಿಂದ ಘುಡಘುಡಿಸುತ ಬಂದ ಧೃಢವುಳ್ಳ ಬಲಿಚಕ್ರವರ್ತಿ
ಪಾಲಿಸಿದ ವರವಾ | ಕೊಡಲಿ ಪಿಡಿದು ಹಡೆದ ತಾಯಿ ಶಿರವಾ ಕಡಿದಾ |
ಮಡದಿ ಒಯ್ದ ರಾವಣನ ಕಡೆದು ಶಿರವಾ ದಾಡಿ ಬಿಟ್ಟು ತಿರುಗುವಂಥ
ತ್ರಿಪುರರರಂಥಪುರವಾ ಏರಿಸಿದ ಅಶ್ವಮೇಧ ಅರ್ಥಿಯಿಂದ ಮೆರೆವಾ ||೨||

ಬ್ರಹ್ಮಗೆ ಒಲಿದು ವೇದವ ತರುವ ಬ್ರಹ್ಮಾಂಡವನ್ಹೊರುವ |
ಗಮ್ಮೀಲಿ ಕಾಯ್ದವ- ನಾಗಿರುವ ಸುಮ್ಮನೆ ಹೋಗಿ ಬರುವಾ |
ಸಿಟ್ಟಿನಿಂದ ನಾರಸಿಂಹ ರೂಪನಾಗಿ ಬಂದ |
ಸೃಷ್ಟಿಯೊಳು ಪರಶುರಾಮ ರೇಣುಕೆಯ ಕಂದ |
ಕಷ್ಟವನ್ನಾಚರಿಸಿದನು ರಾಮ ವನವಾಸದಿಂದ |
ಕೃಷ್ಣಾವತಾರ ಬೌದ್ಧ ಕಲ್ಕಿ ರೂಪ ಒಂದೊಂದಾ |
ಇಷ್ಟುಪರಿ ವರ್ಣಿಸುತ ಹತ್ತಾವತಾರ ಚೆಂದ |
ಸೃಷ್ಠಿಯೋಳು ಕಾಗಿನೆಲೆ ಆದಿಕೇಶವನಿಂದಾ ||೩||
****