Showing posts with label ಸ್ವಾಮಿ ರಕ್ಷಿಸೋ ಶ್ರೀನಿವಾಸ others. Show all posts
Showing posts with label ಸ್ವಾಮಿ ರಕ್ಷಿಸೋ ಶ್ರೀನಿವಾಸ others. Show all posts

Friday, 27 December 2019

ಸ್ವಾಮಿ ರಕ್ಷಿಸೋ ಶ್ರೀನಿವಾಸ others

ರಾಗ : ಯರಕಲ ಕಾಂಬೋಧಿ ತ್ರಿವಿಡೆ ತಾಳ

ಸ್ವಾಮಿ ರಕ್ಷಿಸೋ ಶ್ರೀನಿವಾಸ
ಕಾಮಿತಾರ್ಥವನೀವ ಕಾಕೋದರಾದ್ರೀಶ ||ಪ||

ನಾನಾ ಜನ್ಮದಿ ಬಂದು ನಾನಾವ್ಯಾಧಿಗಳಿಂದ
ದೀನನಾದೆನೊ ದೊರೆಯೇ ನಿನ್ನ ನಂಬದಲೆ
ಮುನ್ನ್ಯಾರು ಗತಿ ಎನಗೆ ಮನ್ನಿಸೈ ನೀ ಬೇಗ
ಸನ್ನಾಹವೇಕಯ್ಯ ಸಣ್ಣವನ ಪೊರೆಯಲು ||೧||

ತಂದೆತಾಯಿಯು ನೀನೆ ಬಂಧುಬಳಗವು ನೀನೆ
ಕಂದನು ಕಾಂತೆಯು ನೀನೆನಗೆ ಹರಿಯೇ
ಅಂದಗಳು ಚಂದಗಳು ಮಂದಿರವು ಮಾಣಿಕವು
ಸಂದೇಹವೇನಯ್ಯ ಸರ್ವವೂ ನೀ ಎನಗೆ ||೨||

ಅಂದು ದ್ರೌಪತಿಯು ಮತ್ತಂದು ದಂತಾವಳನು
ಕಂದ ಪ್ರಹ್ಲಾದನು ಅಂದು ತಾ ಧ್ರುವನು
ಚಂದದೊಳು ನಿನ್ನನ್ನು ಮಂದಮತಿಯನು ಬಿಟ್ಟು
ಪೊಂದಿ ಆನಂದವ ಪಡೆಯಲಿಲ್ಲವೆ ದೇವಾ ||೩||

ಕೊಬ್ಬಿನಾ ಕಣ್ಣು ಕಾಣದೆ ನಿನ್ನ ಮರೆತೆನಯ್ಯ
ಅಬ್ಬರಿಸುತಲಿರ್ಪ ಎನ್ನ ಪಾಪಗಳೀಗ
ಹೆಬ್ಬುಲಿಯಂತಿರ್ಪ ಈ ವಿಷಯಾಸೆ ಕೊಲ್ಲುವುದು
ಗುಬ್ಬಿಗೆ ಬೊಮ್ಮಾಸ್ತ್ರ ತೊಡದೆ ಎನ್ನ ಸಲಹಯ್ಯ ||೪||

ವೈಕುಂಠಪಟ್ಟಣವೆಂಬ ಆ ದಿವ್ಯಾಲಯದೊಳಗೆ
ಸಾಕಾರದಿಂದಲಿ ರಂಜಿಸುವ ನರಹರಿಯೆ
ಏಕಾಂತ ಭಕ್ತನಾದೆನೊ ನಿನ್ನ ಪಾದಕ್ಕೆ
ಸಾಕಲಾರದೆ ಬಿಟ್ಟರೆ ಆರು ಮೆಚ್ಚುವರಯ್ಯ ||೫||
*******