Showing posts with label ವಿಠಲನ ನಾಮ ಮರೆತು ಪೋದೆನಲ್ಲ ಲಟಪಟ ನಾ ಸಟೆಯಾಡುವೆನಲ್ಲ neleyadikeshava. Show all posts
Showing posts with label ವಿಠಲನ ನಾಮ ಮರೆತು ಪೋದೆನಲ್ಲ ಲಟಪಟ ನಾ ಸಟೆಯಾಡುವೆನಲ್ಲ neleyadikeshava. Show all posts

Wednesday, 1 September 2021

ವಿಠಲನ ನಾಮ ಮರೆತು ಪೋದೆನಲ್ಲ ಲಟಪಟ ನಾ ಸಟೆಯಾಡುವೆನಲ್ಲ ankita neleyadikeshava

 .

ವಿಠಲನ ನಾಮ ಮರೆತು ಪೋದೆನಲ್ಲ

ಲಟಪಟ ನಾ ಸಟೆಯಾಡುವೆನಲ್ಲ ಪ


ಶೇಷಗಿರಿಯ ಮೇಲೆ ಸವುತೆಯ ಬಿತ್ತಿದೇವಗಿರಿಯ ಮೇಲೆ ಅವತಾರವಿಕ್ಕಿಹಾಳೂರಿನೊಳಗೊಬ್ಬ ಕುಂಬಾರ ಸತ್ತಗೋಕರ್ಣದೊಳಗೊಬ್ಬ ಪರದೇಶಿ ಅತ್ತ 1


ಆ ಸಮಯದಿ ಮೂರು ರಾಯರ ಕಂಡೆಕುಪ್ಪುಸ ತೊಟ್ಟ ಕೋಳಿಯ ಕಂಡೆಬೆಳ್ಳಕ್ಕಿ ಬೆರಣಿಯ ಮಾಳ್ಪುದ ಕಂಡೆನರೆಸೂಳೆ ಗೆಯ್ವುದ ಕಣ್ಣಾರೆ ಕಂಡೆ 2


ನುಸಿಯೊಂದು ರೊಟ್ಟಿಯ ಸುಡುವುದ ಕಂಡೆಆಡೊಂದು ಮದ್ದಳೆ ಬಡಿವುದ ಕಂಡೆಕಪ್ಪೆ ತತ್ಥೈ ಎಂದು ಕುಣಿವುದ ಕಂಡೆಬಾಡದಾದಿಕೇಶವನ ಕಣ್ಣಾರೆ ಕಂಡೆ3

***