Showing posts with label ಶರಣು ಶರಣು ಶ್ರೀ ದತ್ತಾತ್ರೇಯಾ ಶರಣು ಸಕಲಾ ಭುವನಾಶ್ರಯಾ gurumahipati. Show all posts
Showing posts with label ಶರಣು ಶರಣು ಶ್ರೀ ದತ್ತಾತ್ರೇಯಾ ಶರಣು ಸಕಲಾ ಭುವನಾಶ್ರಯಾ gurumahipati. Show all posts

Wednesday, 1 September 2021

ಶರಣು ಶರಣು ಶ್ರೀ ದತ್ತಾತ್ರೇಯಾ ಶರಣು ಸಕಲಾ ಭುವನಾಶ್ರಯಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಶರಣು ಶರಣು ಶ್ರೀ ದತ್ತಾತ್ರೇಯಾ ಶರಣು ಸಕಲಾ ಭುವನಾಶ್ರಯಾ ಶರಣೆಂಬೆ ಸಿಂಹಾಚಲ ನಿಲಯಾ ಸುರಜನ ರೇಯಾ ಸಲಹಯ್ಯಾ 1 

ವನರುಹ ಸಂಭವ ತ್ರಿಲೋಚನ ಸನಕಾದಿ ಮುನಿ ವಂದಿತ ಚರಣ ಜನವನ ವಿಜನ ವ್ಯಾಪಕ ಘನ ಅನಸೂಯಾ ನಂದನ ಯೋಗೀಶಾ 2 

ತತ್ವಯೋಗ ಸಿದ್ಧಿ ಬುದ್ಧಿ ದಾತಾರಾ ಸತ್ವ ಗುಣಾಲಂ ಕೃತ ಜ್ಞಾನ ಸಾಗರಾ ಸತ್ಯ ಸನಾತನೇ ಮುನಿ ದಿಗಂಬರಾ ಭಕ್ತ ಸಹಕಾರಾ ಅವಧೂತಾ 3 

ಕಂದರ್ಪ ಕೋಟಿ ಸುಂದರಾಕಾರಾ ಹೊಂದಿದಾಭರಣಾನೇಕ ಶೃಂಗಾರಾ ಇಂದು ಸೂರ್ಯಾನಳ ತೇಜ ವ್ಯಾಪಾರಾ ಎಂದೆಂದೆಚ್ಚರಾ ಕಂಡು ನಿನ್ನಾ 4 

ಮಂದಮತಿ ಬಾಲನ ಬಿನ್ನಾಹದ ಸ್ತುತಿ ಬಂದು ಅರ್ಪಿಸಿಕೋ ದುದಿ ಶ್ರೀಪತಿ ಇಂದು ಮೊರೆ ಹೊಕ್ಕೆನು ಅನನ್ಯಾಗತಿತಂದೇ ಮಹಿಪತಿ ಸುತ ಸ್ವಾಮೀ 5

***