Showing posts with label ಆಂಜನೇಯನೆ ಅಮರವಂದಿತ ಕಂಜನಾಭನ hayavadana ANJANEYANE AMARA VANDITA KANJANABHANA. Show all posts
Showing posts with label ಆಂಜನೇಯನೆ ಅಮರವಂದಿತ ಕಂಜನಾಭನ hayavadana ANJANEYANE AMARA VANDITA KANJANABHANA. Show all posts

Friday 1 October 2021

ಆಂಜನೇಯನೆ ಅಮರವಂದಿತ ಕಂಜನಾಭನ ankita hayavadana ANJANEYANE AMARA VANDITA KANJANABHANA






ಆಂಜನೇಯನೆ ಅಮರವಂದಿತ ಕಂಜನಾಭನ ದೂತನೆ |ಪ|
ಸಂಜೀವಿನಿಯನು ತಂದು ಕಪಿಗಳ ನಂಜುಕಳೆದ ಪ್ರಖ್ಯಾತನೆ |ಅ.ಪ|

ಕಾಮನಿಗ್ರಹನೆನಿಸಿ ಸುರರಭಿಮಾನ್ಯ ದೇವತೆ ಎನಿಸಿದೆ
ರಾಮಪಾದಕ್ಕೆರಗಿ ನಡೆದು ನಿಸ್ಸೀಮ ನೀನೆಂದೆನಿಸಿದೆ|

ಸಿಂಧುಹಾರಿದೆ ಶೀಘ್ರದಿಂದಲಿ ಬಂದು ಸೀತೆಗೆ ನಮಿಸಿದೆ
ತಂದು ಮುದ್ರಿಕೆಯಿತ್ತು ಮಾತೆಗೆ ಅಂದು ಸಂತೋಷಪಡಿಸಿದೆ|

ಜನಕತನಯಳ ಮನವ ಹರುಷಿಸಿ ವನವ ಕಿತ್ತೀಡಾಡಿದೆ
ದನುಜರನ್ನು ಸದೆದು ಲಂಕೆಯನನಲಗಾಹುತಿ ನೀಡಿದೆ|

ಘೋರ ರಕ್ಕಸರೆಂಬುವರನು ಮಾರಿವಶವನು ಗೈಸಿದೆ
ಶ್ರೀ ರಾಮ ಕಾರ್ಯವ ವಹಿಸಿ ಅಕ್ಷಕುಮಾರನನು ಸಂಹರಿಸಿದೆ|

ಭರದಿ ಬಂದು ಶ್ರೀರಾಮಪಾದಕ್ಕೆರಗಿ ಬಿನ್ನಹ ಮಾಡಿದೆ
ಉರಗಗಿರಿ ಹಯವದನನ ಪರಮಭಕ್ತನೆಂದೆನಿಸಿದೆ|
***

Anjaneyane amaravandita kanjanabana dutane ||pa.||

Manjinolagadante Saradhiya dantida mahadhirane ||a.pa.||

Anjaneyane ninnagunaparakrama pogalalalave prakyatanesanjivanava
Tandu kapigala nanju kaleda prakyatane ||1||

Kamanigrahanenisi surarabimani devateyeniside rama padakkeragi
Nadedu nissima ninendeniside ||2||

Sindhu haride sigradindali bandu sitege namisidetandu mudreyanittu
Mateya manava santoshapadiside ||3||

Janakatanujeya manava harushisi vanava kittidadidedanu
Jarannu sadedu lankeya analagahuti madide ||4||

Sriramakaryava vahisi akshakumarananu samharisidegora
Rakkasarembuvaranu marivasavanu gaiside ||5||

Baradi bandu sriramapadakkeragi binnaha madide uragagiri
Hayavadanana paramabaktanendeniside ||6||
***


pallavi

AnjanEyane amaravandita kanjanAbhana dUtane

anupallavi

sanjIviniyanu tandu kapigaLa nanju kaLeda prakhyAtane

caraNam 1

kAma nigrahanenisi surarabhimAnya dEvate eniside
rAma pAdakkeragi naDedu nissIma nInendeniside

caraNam 2

sindhu haaride shIghradindali bandu sItege namiside
tandu mudrikeyittu mAtege andu santOSabaDiside

caraNam 3

janakatanayaLa manava haruSisi vanava kittIDADide
danujarannu sadedu lankeyananalagAhuti nIDide

caraNam 4

ghOra rakkasarenbuvaranu mArivashavanu gaiside
shrI rAmakAryava vahisi akSakumArananu samhariside

caraNam 5

bharadi bandu shrIrAma pAdakkeragi binnaha mADide
uragagiri hayavadanana paramabhaktanendeniside
***

ಆಂಜನೇಯನೆ ಅಮರವಂದಿತ 
ಕಂಜನಾಭನÀ ದೂತನೆ ||

ಮಂಜಿನೋಲಗದಂತೆ ಶರಧಿಯ 
ದಾಂಟಿದ ಮಹಾಧೀರನೆ||

ಆಂಜನೇಯನೆ ನಿನ್ನಗುಣಪರಾಕ್ರಮ 
ಪೊಗಳಲಳವೆ ಪ್ರಖ್ಯಾತನೆಸಂಜೀವನವ ತಂದು 
ಕಪಿಗಳ ನಂಜು ಕಳೆದ ಪ್ರಖ್ಯಾತನೆ ||

ಕಾಮನಿಗ್ರಹನೆನಿಸಿ ಸುರರಭಿಮಾನಿ 
ದೇವತೆಯೆನಿಸಿದೆರಾಮಪಾದಕ್ಕೆರಗಿ 
ನಡೆದು ನಿಸ್ಸೀಮ ನೀನೆಂದೆನಿಸಿದೆ ||

ಸಿಂಧು ಹಾರಿದೆ ಶೀಘ್ರದಿಂದಲಿ 
ಬಂದು ಸೀತೆಗೆ ನಮಿಸಿದೆತಂದು ಮುದ್ರೆಯನಿತ್ತು 
ಮಾತೆಯ ಮನವ ಸಂತೊಷಪಡಿಸಿದೆ ||

ಜನಕತನುಜೆಯ ಮನವ ಹರುಷಿಸಿ ವನವ 
ಕಿತ್ತೀಡಾಡಿದೆದನುಜರನ್ನು ಸದೆದು 
ಲಂಕೆಯ ಅನಲಗಾಹುತಿ ಮಾಡಿದೆ ||

ಶ್ರೀರಾಮಕಾರ್ಯವ ವಹಿಸಿ ಅಕ್ಷಕುಮಾರನನು 
ಸಂಹರಿಸಿದೆಘೋರ ರಕ್ಕಸರೆಂಬುವರನು 
ಮಾರಿವಶವನು ಗೈಸಿದೆ ||

ಭರದಿ ಬಂದು ಶ್ರೀರಾಮಪಾದಕ್ಕೆರಗಿ 
ಬಿನ್ನಹ ಮಾಡಿದೆಉರಗಗಿರಿ ಹಯವದನನ 
ಪರಮಭಕ್ತನೆಂದೆನಿಸಿದೆ||
****