..
kruti by rukmangadaru
ನಂದನಂದನನೆ ನಿರಾಮಯಾನಂದ ಚಿದ್ಘನನೆ ಶೌರ್ಯ-ಮಂಡಣನೆ ಯಮ ದಮ ಶಮನನೆ...ಮದಹಾರನೆ ನಗ ಯುಗ್ಮ ಮಥನನೆ ನಗವರ ಧರನೆ ನಾಗ ಫಣಿ ವೀರ ನಟನನೆ 1
ನೀಲ ಕಂದಲನೆ ನಿರಾಮಯ ತುಂದಿಲನೆ | ನೀ ಸೇವಿತ ಸುದಾಮನ ತಂದುಲನೆ ನಿರುಪಮ ಲೀಲನೆ ನಿರ್ಮಲ ಶೀಲನೆ ನೀಷ | ಗೀರ್ಣೂನಲ ಕೀಲನೆ ನೇಮಿತ ಕಾಲನೆ | ನೀರಜ ಮಾಲನೆ ನಿಜ ರುಚಿ ನಿಕೃತ ಮಾಲನೆ ನಿರ್ಜಿತಾಸುರನೆ ನಿವಾರಿತಾನೇಕರ ಜ್ವರನೆ ನಿಕುಂಜ ಭೂಮಂಡಲೇಶ್ವರನೆ | ನಿಃಸಂಸಾರನೆ ನಿರಹಂಕಾರನೆ ನಿರ್ಜರ ಕುಲ ಪರಿವಾರನೆ | ನಿಖಿಲಾಧಾರನೆ ನಿಗಮೋದ್ಧಾರನೆ ನಂದ ಸದಾ ರುಕ್ಮಜನೆ 2
***