Showing posts with label ಕಂಗಳು ಹಿಂಗದಿರಲಿ ಎನ್ನ ನಿನ್ನಮಂಗಳಾಂಘ್ರಿ pranesha vittala. Show all posts
Showing posts with label ಕಂಗಳು ಹಿಂಗದಿರಲಿ ಎನ್ನ ನಿನ್ನಮಂಗಳಾಂಘ್ರಿ pranesha vittala. Show all posts

Sunday, 10 November 2019

ಕಂಗಳು ಹಿಂಗದಿರಲಿ ಎನ್ನ ನಿನ್ನಮಂಗಳಾಂಘ್ರಿ ankita pranesha vittala

by ಪ್ರಸನ್ನವೆಂಕಟದಾಸರು
ಕಂಗಳು ಹಿಂಗದಿರಲಿ ಎನ್ನ ನಿನ್ನಮಂಗಳಾಂಘ್ರಿ ಸರೋಜಂಗಳಲ್ಲಿ ಕೃಷ್ಣ ಪ.

ಕ್ಷಿತಿಯನಳೆದ ಋಷಿಸತಿಯರಘ ಕಳೆದಶ್ರುತಿಸಾರಸ್ತುತಿಗೊಮ್ಮೆಗತಿ ಗೂಢದೊಲಿದಯತಿ ಮುನಿಜನ ದೇವತತಿಗಳ ಮನದಿಪ್ರತಿಕ್ಷಣ ತಟಿತದೀಧಿತಿಯುಳ್ಳ ಪದದಿ 1

ಜಗದಘಹರಿಯೆಂಬ ಮಗಳನು ಪಡೆದಮಿಗಿಲಾದ ಕ್ರತುಕರ್ತನಿಗೆ ಒತ್ತಿ ಪೊರೆದಖಗವರಾದನ ಕರಯುಗಳೊಳು ಮೆರೆದವಿಗಡಾಹಿ ಮೌಳಿಯೋಳ್ ಧಿಗಿಲೆಂಬ ಪದದಿ 2

ಶ್ರೀ ಚಕ್ಷುಚಕೋರ ಪೂರ್ಣಚಂದ್ರ ನಖದನೀಚಹಿಕೇತುವ ನಾಚಿಸಲೆಸೆದಶ್ರೀಚೆನ್ನ ಪ್ರಸನ್ವೆಂಕಟಾಚಲದೊಳಿದ್ದೆನ್ನಾಚರಣೆಗಕ್ಷಯ ಸೂಚಿಪ ಪದದಿ 3
********