ವರ ಹಳ್ಳೇರಾಯಾ ಮಾಂಪಾಲಯ ಪ
ಕರ ಮುಗಿವೆನು ದುಮ್ಮದ್ರಿನಿಲಯ ಅ.ಪ
ತರಣಿ ಕುಲತಿಲಕ ಸಿರಿರಾಮನ ಪದ
ಸರಸಿಜ ಮಧುಕರ ಸುರಗಣ ಸೇವ್ಯಾ 1
ಸೋಮ ಕುಲಜ ಬಲರಾಮನನುಜನ
ಪ್ರೇಮಪಾತ್ರ ಬಲಭೀಮನೆ ಕೃಪಯಾ2
ಸಿರಿಕೃಷ್ಣನೆ ಪರತರನೆಂದರುಹಲು
ವಿರಚಿತ ಶಾಸ್ತ್ರ ಶ್ರೀ ಗುರು ಮಧ್ವಾರ್ಯ 3
ಯವನ ಕುಲದಿ ಭಜಿಸುವರಿಗೊಲಿದೆಯಾ
ಅವನಿಸುರಾರ್ಚಿತ ಶ್ರೀ ಪವಮಾನತನಯಾ4
ಶರಣು ಜನಕೆ ಸುರತರುವೆಂದೆನಿಸಿದ
ಸಿರಿಕಾರ್ಪರ ನÀರಹರಿಗತಿ ಪ್ರೀಯಾ 5
****