Showing posts with label ಭಾಗ್ಯವಂತನು ಇನ್ನು ಯಾರಯ್ಯ hayavadana. Show all posts
Showing posts with label ಭಾಗ್ಯವಂತನು ಇನ್ನು ಯಾರಯ್ಯ hayavadana. Show all posts

Wednesday 1 September 2021

ಭಾಗ್ಯವಂತನು ಇನ್ನು ಯಾರಯ್ಯ ankita hayavadana

 ..

ಭಾಗ್ಯವಂತನು ಇನ್ನು ಯಾರಯ್ಯ ಪ.


ಯೋಗ್ಯ ವೈಷ್ಣವಕುಲದ ಭಾಗವತನಲ್ಲದೆ ಅ.ಪ.


ಚತುರನೆನಿಸಿ ಲಕ್ಷ ಮನೆಮನೆ ತಿರುಗಿದೆಚತುರಾನನನಾ ಮಾತು ಅನುಸರಿಸಿದೆಸತು ಚಿತು ಆನಂದ ಆತ್ಮ ಹರಿಸ-ರ್ವೋತ್ತಮನ ದಾಸರದಾಸ ಎಂಬುವನಲ್ಲದೆ 1


ತಾರÀತಮ್ಯ ಪಂಚಭೇದವನೆ ತಿಳಿದು ಶ್ರೀಮಾರುತನ ಮತಗಳೇ ಹಾರೈಸುತಕರ್ಮ ವಂಚನೆಯಿಲ್ಲದನುದಿನದಿ ಮಾಡುತಚರಿಸುತ ಸಂಚಿತಾಗಾಮಿ ಕಳೆವವನಲ್ಲದೆÉ2


ಪತಿತಪಾವನ ಶ್ರೀಹರಿಗುರುಗಳನು ಮೋದದಿಕ್ಷಿತಿಯೊಳಗೆ ಭಜನೆಯೆ ಧನವೆನ್ನುತಅತಿಶಯದಿ ಶೇಷಾದ್ರಿ ಹಯವದನನ್ನ ನೆನೆನೆನೆದುಪ್ರೀತಿಯಿಂದಲಿ ಭಜಿಸುವವನಲ್ಲದೆ 3

***