Showing posts with label ವೇದನಾಯಕಿ ಆದರದಲಿ ನಿನ್ನಾರಾಧಿಪ ಭಕ್ತರ prasannashreenivasa. Show all posts
Showing posts with label ವೇದನಾಯಕಿ ಆದರದಲಿ ನಿನ್ನಾರಾಧಿಪ ಭಕ್ತರ prasannashreenivasa. Show all posts

Thursday, 5 August 2021

ವೇದನಾಯಕಿ ಆದರದಲಿ ನಿನ್ನಾರಾಧಿಪ ಭಕ್ತರ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ವೇದನಾಯಕಿ - ಭವಾನಿ


ವೇದನಾಯಕಿ

ಆದರದಲಿ ನಿನ್ನಾರಾಧಿಪ ಭಕ್ತರ

ಸಾದರದಲಿ ಸದಾ ಕಾಯ್ವ ಉದಾರಿ ಪ


ಅಮೃತ ಸರಿತ ಕಾವೇರಿ ಭವಾನಿ

ಸುಮ್ಮನೋಹರ ಸಂಗಮ ಕ್ಷೇತ್ರದಲ್ಲಿ

ಅಮಲ ಸ್ಪಟಿಕ ನಿಭ ಕಾಂತಿಮಾನ್ ಈಶ

ಸಮೇತ ವಿರಾಜಿಪ ಸುಮನಸನುತೆ -

- ಮನ್ಮಾತೆ ನಮಸ್ತೆ 1

ಸ್ನಾನ ಸಂಧ್ಯಾ ಜಪ ಸೇವೆ ಅರ್ಚನೆಗಳು

ಏನೇನು ಮಾಡದೆ ಹೀನ ಕರ್ಮದಿ ರತ

ಎನ್ನ ಮನ್ನಿಸಿ ಬಹುದಯದಿ ಸದಾ ನೀ

ಘನತರ ಪಾಲಿಸೆ ಮೀನಲೋಚನೆ -

- ಮನ್ಮಾತೆ ಕೃಪಾಕರಿ 2

ವೇಧನ ಪಿತ ಜಗ ಜನ್ಮಾದಿ ಕಾರಣ

ಆದಿಕೇಶವ ಶ್ರೀ ಸುಂದರೀ ರಮಣ ಪ್ರ -

ಮೋದಿ ಗೋಪಾಲ ಪ್ರಸನ್ನ ಶ್ರೀನಿವಾಸ

ಶ್ರೀದನ ಕಾಣಿಸೆ ಖೇಶ ವಲ್ಲೀಶನ ಮಾತೆ ಮನ್ಮಾತೆ 3

***