Showing posts with label ರಕ್ಷಿಸಲರಿಯಾ ರಂಗಯ್ಯ ರಕ್ಷಿಸಲರಿಯಾ prasannavenkata. Show all posts
Showing posts with label ರಕ್ಷಿಸಲರಿಯಾ ರಂಗಯ್ಯ ರಕ್ಷಿಸಲರಿಯಾ prasannavenkata. Show all posts

Saturday, 16 November 2019

ರಕ್ಷಿಸಲರಿಯಾ ರಂಗಯ್ಯ ರಕ್ಷಿಸಲರಿಯಾ ankita prasannavenkata

by ಪ್ರಸನ್ನವೆಂಕಟದಾಸರು
ರಕ್ಷಿಸಲರಿಯಾ ರಂಗಯ್ಯ ರಕ್ಷಿಸಲರಿಯಾ ಪ.

ರಕ್ಷಿಸಲರಿಯೇನೊ ಲಕ್ಷ್ಮೀಪತಿ ಎನ್ನಈಕ್ಷಿಸಿ ಕರುಣಕಟಾಕ್ಷದಿ ಭಕ್ತನ ಅ.ಪ.

ಭಾರವಾಗಿಹೆನೇನೊ ರೋಮಕುಳಿಗಳೊಳುಭೂರಿಬ್ರಹ್ಮಾಂಡಗಳನಿಟ್ಟಿಹಗೆಮೀರಿದವನೇನಯ್ಯ ಬೆಲೆ ಪೇಳಿ ಕೈಗಟ್ಟಿಮಾರುವ ಭಟರಲ್ಲಿ ನಾ ಪೇಳುವೆನು 1

ಜಿತಮನನಲ್ಲೆಂದು ಹತ ಮಾಡೋದುಚಿತವೆಪ್ರತಿಕ್ಷಣಕೊದಗೊ ತಂದೆ ಜಿಹ್ವೆಗೆಅತಿತನಕಘ ಮುತ್ತೇಳದಿದ್ದರೆ ನಿನ್ನಪತಿತ ಪಾವನನೆಂಬೋರೆ ಚೀರುವರೆ 2

ಆಚಾರವಿಹೀನನೆಂದೋಕರಿಸಲಿ ಬೇಡನೀಚೋದ್ಧಾರಕ ಬಿರುದು ನೀ ತಳೆದೆಪ್ರಾಚೀನ ಕರ್ಮದಿಂದಲಿ ನಾ ದಣಿದಮೇಲೆನಾಚಿಕಿನ್ಯಾರಿಗಯ್ಯ ಹೇಜೀಯ3

ದೋಷಿ ನಾನೆಂದು ದೂರಿಡದಿರೊ ತವನಾಮಘೋಷಣೆಗುಳಿವುದೇನೊ ಪಾಪೇನೊಹೇಸಿ ದರಿದ್ರನೆಂಬುವರದ್ಯಾರೊ ನಿನ್ನಭಿಲಾಷೆವಿಡಿದ ಬಳಿಕ ಹೇ ಶ್ರೀಶ 4

ಡೊಂಕುನಡೆವರ ಕೊಂಕು ತಿದ್ದುವೆ ನೀಸಂಖ್ಯೆಗಾಣೆನೊ ಕೊನೆಗೆ ಕೃಪೆಗೆಲೆಂಕರಲಿ ಮನವಿದ್ದರೆ ಸಾಕು ಪ್ರಸನ್ನವೆಂಕಟ ಸಾರ್ವಭೌಮನಿಷ್ಕಾಮ5
*******