Showing posts with label ಎಷ್ಟು ಸುಕೃತದಿಂದ ಕಂಡಿಯೆ ramesha. Show all posts
Showing posts with label ಎಷ್ಟು ಸುಕೃತದಿಂದ ಕಂಡಿಯೆ ramesha. Show all posts

Saturday, 9 November 2019

ಎಷ್ಟು ಸುಕೃತದಿಂದ ಕಂಡಿಯೆ ankita ramesha

by ಗಲಗಲಿಅವ್ವನವರು
ಎಷ್ಟು ಸುಕೃತದಿಂದ ಕಂಡಿಯೆ ಮನೋಭಿಷ್ಟಗಳನೆ ಪಡೆದುಕೊಂಡಿಯೆ ದೂತೆ ಪ.

ಪಾದನೋಡಲು ಅತಿ ಪಾವನಹಾಂಗೆ ಮೋದಭರಿತಳು ನೀ ಆದೆನೆ ದೂತೆಸಾಧು ಜನರು ನಿನ್ನ ಸ್ವಾಧೀನನಮ್ಮಮಾಧವಅನುದಿನಅಧೀನ ದೂತೆ1

ಕೆಂಚಿಹಸ್ತವ ನೀನು ಕಂಡಿಯೆ ಹ್ಯಾಂಗೆಸಂಚಿತಾಗಾಮಿ ಕಳಕೊಂಡೆಯೆದೂತೆ ಪಾಂಚಾಲಿದಯವ ಪಡಕೊಂಡಿಯೆನಿನ್ನ ವಾಂಚಿತಾರ್ಥವ ಕೈಕೊಂಡಿಯೆ ದೂತೆ 2

ಮುಖವ ನೋಡಲು ನಿಜ ಮುಕ್ತಿಯ ಹಾಗೆಭಕ್ತಿ ಜ್ಞಾನವು ವಿರಕ್ತಿಯೆ ದೂತೆದಿವ್ಯ ಪ್ರಕೃತಿಯ ಗೆಲುವಂಥ ಶಕ್ತಿಯನಮ್ಮ ಲಕುಮಿ ರಾಮೇಶ ಒಲಿಯೆ ಮುಕ್ತಿಯೆ ದೂತೆ 3
*********