..
ಹೊಡಿ ಜೈಭೇರಿ ಮ್ಯಾಲೆ ಕೈಯ ತಿವ್ರ್ಹೊಡಿ ಪ
ಕಡಲೊಳು ಭೇದಿಸಿ ಅಡಗಿದ್ದ ್ಹಯಾಸುರ-
ನ್ಹೊಡೆದು ವೇದವ ತಂದೊಡೆಯ ಶ್ರೀಕೃಷ್ಣನೆಂದ್ಹೊಡಿ 1
ಮಂದರೋದ್ಧರ ತಾ ಸುಂದರಿ ರೂಪದಿ
ತಂದಮೃತೆರೆದ ಮುಕುಂದ ಶ್ರೀಹರಿಯೆಂದ್ಹೊಡಿ 2
ಖಳಹಿರಣ್ಯಾಕ್ಷನ ಸೆಳೆದಪ್ಪಳಿಸಿದ
ಇಳೆಧಾರಕ ನಳಿನಾಕ್ಷ ಶ್ರೀಹರಿಯೆಂದ್ಹೊಡಿ3
ಕೂಸಿನ ನುಡಿಗತಿ ರೋಷದಿಂದಸುರನ
ನಾಶ ಮಾಡಿದ ಲಕ್ಷ್ಮೀಶ ಶ್ರೀಹರಿಯೆಂದ್ಹೊಡಿ4
ತ್ರಿಚರಣದ ಇಳೆ ಬೇಡಿ ತ್ರಿವಿಕ್ರಮ-
ರೂಪ ಧರಿಸಿದ ಉಪೇಂದ್ರ ಶ್ರೀಹರಿಯೆಂದ್ಹೊಡಿ 5
ಕೊಡಲಿ ಪಿಡಿದು ತಾ ಮಡುಹಿದ ದÉೂರೆಕುಲ
ಕಡು ಮಾಋಷಿ ಪೊಡವ್ಯೇಶ ಶ್ರೀಹರಿಯೆಂದ್ಹೊಡಿ 6
ದಶರಥ ಸುತ ದಶಶಿರ ಹತ ಮಾಡಿದ
ಸತಿ ಸೀತಾಂಗನೆ ಪತಿಯೆ ಶ್ರೀಹರಿಯೆಂದ್ಹೊಡಿ7
ಗೋಕುಲದೊಳಗಾನೇಕ ಸೂರ್ಯರಂ
ತಾಕಳ ಕಾಯ್ದ ಗೋಪಾಲ ಶ್ರೀಹರಿಯೆಂದ್ಹೊಡಿ 8
ಮುದ್ದು ಸ್ತ್ರೀಯರ ವ್ರತ ಮೋಹಿಸಿ ಕೆಡಿಸಿದ
ಶುದ್ಧ ವೈಷ್ಣವರಿಗೆ ಸುಲಭ ಶ್ರೀಹರಿಯೆಂದ್ಹೊಡಿ 9
ದುಷ್ಟ ಕಲಿಗಳಿಗೆ ಶಿಕ್ಷಕ ತಾ ನಿ-
ರ್ದುಷ್ಟನು ಭೀಮೇಶಕೃಷ್ಣ ಶ್ರೀಹರಿಯೆಂದ್ಹೊಡಿ 10
***