Showing posts with label ಸ್ಮರಿಸು ಮನವೆ ನೀ ದೇವಕಿಕಂದನ mahipati. Show all posts
Showing posts with label ಸ್ಮರಿಸು ಮನವೆ ನೀ ದೇವಕಿಕಂದನ mahipati. Show all posts

Wednesday, 11 December 2019

ಸ್ಮರಿಸು ಮನವೆ ನೀ ದೇವಕಿಕಂದನ ankita mahipati

ಯಮನ್ ರಾಗ ಕೇರವಾ ತಾಳ

ಸ್ಮರಿಸು ಮನವೆ ನೀ ದೇವಕಿಕಂದನ ||ಧ್ರುವ||

ಶರಣರ ಪಾಲನ ದುರುಳರ ನಾಶನ ||೧||

ಉರಗಶಯನ ಗರುಡವಾಹನನ ||೨||

ಸಿರಿಯಲೋಲನ ಪರಮಪಾವನನ ||೩||

ಸುರರಾಜವಂದ್ಯನ ಕರಿರಾಜಪ್ರಿಯನ ||೪||

ಗಿರಿಯನೆತ್ತಿದನ ತುರುಗಳಗಾಯ್ದವನ ||೫||

ಹರಿನಾಮಧ್ಯೇಯನ ಸಾರಸಂಜೀವನ ||೬||

ದಾರಿದ್ರ್ಯಭಂಜನ ದುರಿತನಿವಾರಣ ||೭||

ಸರ್ವಾರ್ಥಕಾರಣ ಹರುಷದ ಜೀವನ ||೮||

ಪರಿಪೂರ್ಣವಿಹನ ಪೂರಿತಕಾಮನ ||೯||

ಗುರುಶಿರೋರತ್ನನ ಕರುಣಲೋಚನನ ||೧೦||

ಸ್ಮರಿಸು ಮನವೆ ನೀ ಮಹಿಪತಿ ಈಶನ ||೧೧||
****

ಸ್ಮರಿಸುಮನವೆ ನೀ ದೇವಕಿ ಕಂದನ ಪ  

ಪಾಲನ ಕುರುಳರ ನಾಶನ 1 

ಉರಗಶಯನನ ಗರುಡವಾಹನನ 2 

ಸಿರಿಯ ಲೋಲನ ಪರಮ ಪಾವನನ 3 

ಸುರರಾಜವಂದ್ಯನ ಕರಿರಾಜಪ್ರಿಯನ 4 

ಗಿರಿಯನೆತ್ತಿದನ ತುರುಗಳಗಾಯದ್ದವನ 5 

ಸಾರ ಸಂಜೀವನ 6 

ಭಂಜನ ದುರಿತ ನಿವಾರಣ 7 

ಸರ್ವಾರ್ಥಕಾರಣ ಹರುಷದ ಜೀವನ 8 

ಪರಿಪೂರ್ಣವಿಹನ ಪೂರಿತ ಕಾಮನ 9 

ಗುರುಶಿರೋರತ್ನನ ಕರುಣಲೋಚನ 10 

ಸ್ಮರಿಸು ಮನವೆ ನೀ ಮಹಿಪತಿ ಈಶನ 11

****