Showing posts with label ಎಂತು ತುತಿಸಲಿ ಎನ್ನ ದೈವತ ಸಂತತಾ ankita gopala vittala ENTU TUTISALI ENNA DAIVATA SANTATA. Show all posts
Showing posts with label ಎಂತು ತುತಿಸಲಿ ಎನ್ನ ದೈವತ ಸಂತತಾ ankita gopala vittala ENTU TUTISALI ENNA DAIVATA SANTATA. Show all posts

Friday, 13 December 2019

ಎಂತು ತುತಿಸಲಿ ಎನ್ನ ದೈವತ ಸಂತತಾ ankita gopala vittala ENTU TUTISALI ENNA DAIVATA SANTATA

 ರಾಗ : ಹಂಸಧ್ವನಿ   ಆದಿತಾಳ

Audio by Vidwan Sumukh Moudgalya

ಶ್ರೀ ಗೋಪಾಲದಾಸಾರ್ಯ ವಿರಚಿತ ಪ್ರಾಣದೇವರ ಕೃತಿ


ಎಂತು ತುತಿಸಲಿ ಎನ್ನ ದೈವತ
ಸಂತತಾ ನಮ್ಮ ಸಲಹುವಾನಾ
ಅಂತರಂಗದಿ ಹರಿಯ ತೋರಿಸಿ
ಸಂತೋಷದಿಂದ ನಲಿವ ಪವನನ ॥ಪ॥

ತಾನು ಮಾಡಿದ ಕರ್ಮಶೇಷವು
ತಾನು ತಿಳಿದ ಜ್ಞಾನಶೇಷವು
ತಾನು ಮಾಡಿದ ಭಕ್ತಿಶೇಷವು
ನಾನಾ ಸಾಧನಶೇಷವೂ
ತಾನೆ ಕರುಣಿಸಿ ಜೀವಯೋಗ್ಯತೆ
ಯಾನು ಅರಿತು ಕರ್ಮ ಮಾಡಿಸಿ
ತಾನು ಸಹಿತದಿ ಧ್ಯಾನದಲಿ ಹರಿ
ಕಾಣಿಸೀ ತೋರ್ಪ ಕರುಣಿಯ ॥೧॥

ಇವನ ಪ್ರೇರಣೆ ಹರಿಯ ಪ್ರೇರಣೆ
ಇವನ ಸೇವಿಯೆ ಹರಿಯಸೇವೆಯು
ಇವನ ಕರುಣವೆ ಹರಿಯ ಕರುಣವು
ಇವನ ಬಲವೆ ಪ್ರಬಲವೂ
ಇವನ ನಂಬಲು ಹರಿಯು ನಂಬಿದ
ಇವನು ಒಲಿಯಲು ಹರಿಯ ಒಲಿವ
ಇವನೆ ಮುಖ್ಯನಾಗಿ ನಮ್ಮನು
ಪವನಗತಿ ಪೊಂದಿಸುವರನಾ ॥೨॥

ಜ್ಞಾನ ಭಕುತಿ ವೈರಾಗ್ಯ ಖಣಿಯು
ದಾನವಾಂತಕ ಧರ್ಮಶೀಲಾ
ಪೂರ್ಣಬೋಧಯಾ ಪುಣ್ಯನಾಮಕ
ಪ್ರಾಣೋಪಾನ ಉದಾನರಿಗೆ
ಪ್ರಾಣ ಮುಖ್ಯಪ್ರಾಣದವ ನಮ್ಮ
ತ್ರಾಣ ಇಲ್ಲವು ಈತನು ಇಲ್ಲದಿರೆ
ಪ್ರಾಣಪತಿ ಗೋಪಾಲವಿಟ್ಠಲನ
ಕಾಣಿಸೀ ತೋರ್ಪ ಕರುಣೆಯ ॥೩॥
***

Entu tutisali ennadevana santata namma salahona
Antarangadi hariya torisi santoshadinda naliva pavanana ||pa||

Tanu madida karmaseshavu tanu tiluhida j~janaseshavu
Tanu madida bakutiseshavu nana sadhanaseshavu
Tanu karunisi jivayogyateyenu aritu karmamadisi
Tanu sahita dhyanadali hari kanisi torpa karuneya ||1||

Ivana prerane hariya prerane ivana seveyu hariya seveyu
Ivana karunave hariya karunavu ivana balave prabalavu
Ivanu nambalu hariyu nambuva ivanu oliyalu hariyu oliyuva
Pavanakyanagi nammanu pavanagati pondisuvana ||2||

J~janabakuti vairagyakaniyu danavantaka dharmasila
Purnabodheya punyanamaka pranapanavudanarige
Prana mukyaprana iva namma prananilladu ivanu illadire
Pranapati gopalavithalana kanisi torpa karuneya ||3||
***

ರಾಗ : ಭೈರವಿ  ತಾಳ : ಖಂಢಛಾಪು

ಎಂತು ತುತಿಸಲಿ ಎನ್ನದೇವನ ಸಂತತ ನಮ್ಮ ಸಲಹೋನ 
ಅಂತರಂಗದಿ ಹರಿಯ ತೋರಿಸಿ ಸಂತೋಷದಿಂದ ನಲಿವ ಪವನನ   ।।ಪ।।

ತಾನು ಮಾಡಿದ ಕರ್ಮಶೇಷವು ತಾನು ತಿಳುಹಿದ ಜ್ಞಾನಶೇಷವು 
ತಾನು ಮಾಡಿದ ಭಕುತಿಶೇಷವು ನಾನಾ ಸಾಧನಶೇಷವು 
ತಾನು ಕರುಣಿಸಿ ಜೀವಯೋಗ್ಯತೆಯೇನು ಅರಿತು ಕರ್ಮಮಾಡಿಸಿ 
ತಾನು ಸಹಿತ ಧ್ಯಾನದಲಿ ಹರಿ ಕಾಣಿಸಿ ತೋರ್ಪ ಕರುಣೆಯ        ।।೧।।

ಇವನ ಪ್ರೇರಣೆ ಹರಿಯ ಪ್ರೇರಣೆ ಇವನ ಸೇವೆಯು ಹರಿಯ ಸೇವೆಯು 
ಇವನ ಕರುಣವೆ ಹರಿಯ ಕರುಣವು ಇವನ ಬಲವೇ ಪ್ರಬಲವು 
ಇವನು ನಂಬಲು ಹರಿಯು ನಂಬುವ ಇವನು ಒಲಿಯಲು ಹರಿಯು ಒಲಿಯುವ
ಪವನಾಖ್ಯನಾಗಿ ನಮ್ಮನು ಪವನಗತಿ ಪೊಂದಿಸುವನ                ।।೨।।

ಜ್ಞಾನಭಕುತಿ ವೈರಾಗ್ಯಖಣಿಯು ದಾನವಾಂತಕ ಧರ್ಮಶೀಲ 
ಪೂರ್ಣಬೋಧೆಯ ಪುಣ್ಯನಾಮಕ ಪ್ರಾಣಾಪಾಣವುದಾನರಿಗೆ 
ಪ್ರಾಣ ಮುಖ್ಯಪ್ರಾಣ ಇವ ನಮ್ಮ ಪ್ರಾಣನಿಲ್ಲದು ಇವನು ಇಲ್ಲದಿರೆ 
ಪ್ರಾಣಪತಿ ಗೋಪಲವಿಠಲನ ಕಾಣಿಸಿ ತೋರ್ಪ ಕರುಣೆಯ        ।।೩।।
**********