sureendra teertha rayara mutt yati stutih
ರಚನೆ : ಶ್ರೀ ಕುರಡಿ ರಾಘವೇಂದ್ರಾಚಾರ್ಯರು
ಅಂಕಿತ : ಲಕುಮೀಶ
ಸೂರೀಂದ್ರ ಸೂರೀಂದ್ರ ।। ಪಲ್ಲವಿ ।।
ಸೂರಿ ಜನರಿಂದಾರಾಧಿತ ಶ್ರೀ ।। ಅ ಪ ।।
ಯೋಗೀ೦ದ್ರರಿಗೆ ಪೂರ್ವಾಶ್ರಮದಣ್ಣ ।
ಯೋಗೀ೦ದ್ರರಿಂದಲಿ
ಯೋಗಿ ನೀನಾದಂಥ ।। ಚರಣ ।।
ಖೂಳ ದುರ್ಮತ ಎದೆ
ಶೂಲ ನೀನೆನಿಸುತ ।
ಮೂಲರಾಮನ ಪೂಜೆ
ಕಾಲ ಕಾಲದಿಗೈದ ।। ಚರಣ ।।
ಸುಖಮುನಿ ಶಾಸ್ತ್ರ ಸ್ಥಿರ
ಸುಖಕೇ ಪಠಿಸುತ ।
ಲಕುಮೀಶ ಧ್ಯಾನದಿ ಮಧುರೆಲಿ
ನಿಂತ ಗುರು ।। ಚರಣ ।।
****