kruti by ಗುರುಗೋವಿಂದಠಲ (ಮೈಸೂರು)
ರಾಗ: [ಮಧ್ಯಮಾವತಿ] ತಾಳ: [ತಿಶ್ರನಡೆ]
ಮಂಗಳಂ ಮಂಗಳಂ ಪ
ಮಂಗಳಂ ಮಂಗಳಂ ಪರಿಮಾಳಾರ್ಯರಿಗೆ
ತುಂಗೆ ತೀರಗ ಯತಿ ಪುಂಗರೀಗೇ ಅ.ಪ.
ಮಧು ವೈರಿ ಪದ ಭೃಂಗ ಸುಧೀಂದ್ರ ಚರಣಾಬ್ಜ
ಮಧುಕರರೆನಿಸುತ್ತ ಸುಧೆಯ ಸೌರಭವ
ಬುಧ ಜನಕುಣಿಸುತ್ತ ವಿಧ ವಿಧ ಮೆರೆಯುವ
ತ್ರಿದಶ ಭೂರುಹವೆನಿಸಿ ಸದಯದಿ ಪೊರೆವಗೇ 1
ಮಧ್ವ ಮತಾಬ್ಧಿಗೆ ಶುದ್ಧ ಪೂರ್ಣೇಂದ್ವಿಗೆ
ಅದ್ವೈತ ಕಲಿಮಲ ದಾವಾಗ್ನಿಗೇ
ಸದ್ವೈಷ್ಣವ ಕುಮುದೇಂದು ವಿದ್ವಾಂಸನತ ಪಾದ
ಶೌದ್ಧೋದನಿಯ ಮತ ವಿಧ್ವಂಸಕಗೇ 2
ಕರದೆಡೆ ಬರುವಂಥ ಪರಮ ದಯಾಳುಗೆ
ಧರೆಯೊಳೆಲ್ಲೆಲ್ಲೂ ಮೆರೆಯುತಿಹಗೇ
ಶರಣರ ಹೃತ್ಕಮಲ ವರಮಿತ್ರನೆಂದೆನಿಸಿ
ಗುರುಗೋವಿಂದವಿಠಲ ಚರಣಾಬ್ಜ ಧೇನಿಪಗೇ 3
****