..
Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane
ಸುತ್ತಬೇಕು ಜನ್ಮವೆತ್ತಬೇಕು ಪ
ಕತ್ತಲೆ ಸಂಸಾರದೊಳು ಹೊತ್ತು ಹೊರೆಯ
ಹೊತ್ತುಕೊಂಡು ತತ್ತರಗೊಳುತ್ತ ನಿತ್ಯ ಅ.ಪ
ಭರತಖಂಡದೊಳು ಪುಟ್ಟಿ
ಮರುತ ಮತವ ಪೊಂದಿಕೊಂಡು
ಗುರುಕೃಪೆಯನು ಪಡೆದು
ಹರಿ ಸರ್ವೋತ್ತಮನೆಂದರಿಯೋ ತನಕ 1
ಅರಿಷಡ್ವರ್ಗವನ್ನೆ ತ್ಯಜಿಸಿ
ದುರುಳರ ಸಂಗ ಕತ್ತರಿಸಿ
ಪರಿ ಪರಿ ಕಾರ್ಯ ಕರ್ಮದೊಳು
ಹರಿಯು ತೋರುವ ತನಕ 2
ಬಿಂಬ ವಿಜಯ ರಾಮಚಂದ್ರ -
ವಿಠಲರಾಯನು ಹೃದಯ
ಅಂಬರದೊಳಗೆ ಪೊಳೆದು
ಅಂಬವಿರಜೆಯಲಿ ಮುಳುಗೊ ತನಕ 3
***