Showing posts with label ಪಾಹೀ ಪಾಹೀ ಗುರುಮೋಹನರಾಯಾ pranesha vittala mohana dasa stutih. Show all posts
Showing posts with label ಪಾಹೀ ಪಾಹೀ ಗುರುಮೋಹನರಾಯಾ pranesha vittala mohana dasa stutih. Show all posts

Friday, 27 December 2019

ಪಾಹೀ ಪಾಹೀ ಗುರುಮೋಹನರಾಯಾ ankita pranesha vittala mohana dasa stutih

by ಪ್ರಾಣೇಶದಾಸರು
ರಾಗ : ನಾದನಾಮಕ್ರಿಯೆ ತಾಳ : ಆದಿ 

ಪಾಹಿ ಪಾಹಿ ಗುರು -
ಮೋಹನರಾಯಾ ।। ಪಲ್ಲವಿ ।। 
ಪಾಹಿ ಪಾಹಿ ಗುರು -
ಮೋಹನ ಸಿಂಧುರ ।
ವಾಹನ ಪದ ಪಂಕೇರುಹ -
ಭೃಂಗ ।। ಅ. ಪ ।। 

ನವ ಭಕುತಿಗಳೆಂಬೋ -
ಸರಪಳಿಯೊಳು ।
ನವ ನವ ರೂಪದಿ -
ನಲಿವ ಸುಧೀರಾ ।। ಚರಣ ।। 

ಪದುಮನಾಭನ -
ಧ್ಯಾನದ ಮದವೇರಿ ।
ಪದೆಪದೆಗೆ ಹರಿಪದವಾ-
ಗಾವಾ ।। ಚರಣ ।। 

ವಿಜಯದಾಸರ ಪದ-
ರಜವ ಧರಿಸಿ ।
ವೀರಜ ಪ್ರಾಣೇಶ-
ವಿಠ್ಠಲನ ಭಜಿಸಿದಿ ।। ಚರಣ ।।
***

ಶ್ರೀ ಮೋಹನದಾಸರ ಸ್ತೋತ್ರ
ಪಾಹಿಪಾಹಿ ಗುರುಮೋಹನರಾಯಾ ಪಾಹಿಪಾಹಿ ಪ

ಪಾಹಿಪಾಹಿಗುರುಮೋಹನಸಿಂಧುರಹರಿಪಾದಪಂಕೇರುಹ ಮಧುಪಾ ಅ.ಪ.

ನವ ವಿಧ ಭಕುತಿ ಎಂಬೊ ನವ ನವ ಸರಪಳಿಯೊಳು |ನವ ನವ ರೂಪದಿ ನಲಿವ ಸುಧೀರಾ 1

ಪದುಮನಾಭನ ಧ್ಯಾನವ ಮದವೇರಿ |ಪದೋ ಪದಿಗೆಹರಿಪದಾವಗಾಹಿ 2

ವಿಜಯರಾಯರ ಪಾದರಜವ ಧರಿಸಿ ನೀ- |ರಜ ಪ್ರಾಣೇಶ ವಿಠಲನಲ್ಲೆರಗಿದೊ 3
******