Showing posts with label ಬೆಳಗಿರೆ ಆರುತಿ ಲಲನೆಯರೆಲ್ಲರು karpara narahari. Show all posts
Showing posts with label ಬೆಳಗಿರೆ ಆರುತಿ ಲಲನೆಯರೆಲ್ಲರು karpara narahari. Show all posts

Monday, 2 August 2021

ಬೆಳಗಿರೆ ಆರುತಿ ಲಲನೆಯರೆಲ್ಲರು ankita karpara narahari

ಬೆಳಗಿರೆ ಆರುತಿ ಲಲನೆಯರೆಲ್ಲರು

ಬಲಿ ನೃಪತಿಯ ಬಾಗಿಲ ಕಾಯ್ದವಗೇ ಪ

ಶಿಲೆಯನು ಪದದಲಿ ಲಲನೆಯ ಮಾಡಿದ

ಇಳಿಜಾರಮಣನ ಚಲುವ ಮೂರುತಿಗೆ1

ಪದುಮಾವತಿಯಳ ಮದುವೆ ಯಾದವಗೆ

ಸುದತಿಯೆಲ್ಲರು ಮುದದಲಿ ಪಾಡುತ 2

ಕರಿವರ ಕರೆಯಲು ಭರದಿ ಬಂದೊದಗಿದ

“ಸಿರಿ ಕಾರ್ಪರ ನರಹರಿ“ ರೂಪನಿಗೆ 3

****