Showing posts with label ಜ್ಞಾನಗುರು ಶುದ್ಧ ಮಡಿವಾಳ ಮನ ಮೈಲಿ ತೊಳೆವ ನಿರ್ಮಳ mahipati. Show all posts
Showing posts with label ಜ್ಞಾನಗುರು ಶುದ್ಧ ಮಡಿವಾಳ ಮನ ಮೈಲಿ ತೊಳೆವ ನಿರ್ಮಳ mahipati. Show all posts

Wednesday 1 September 2021

ಜ್ಞಾನಗುರು ಶುದ್ಧ ಮಡಿವಾಳ ಮನ ಮೈಲಿ ತೊಳೆವ ನಿರ್ಮಳ ankita mahipati

ಜ್ಞಾನ ಗುರು ಶುದ್ಧ ಮಡಿವಾಳ ಮನ ಮೈಲಿ ತೊಳೆವ ನಿರ್ಮಳ ಪ  


ದೃಢ ಮಾಡುವ ಬಂಡೆಗಲ್ಲು ತೊಡೆವ ಸುಭೋಧ ಸಬಕಾರ ಮೇಲು ಹಿಡಿದು ಹಿಂಡುವ ಮನ ಮೈಲು ಕುಡುವ ವೈರಾಗ್ಯದ ಬಿಸಿಲು 1 

ಉದ್ದಿ ಒರಸುವ ಸಬಕಾರ ಕೈಯ ಎದ್ದಿ ವಿವೇಕ ಉದರ ನಿಶ್ಚಯ ಶುದ್ಧದೋರಿಸಿ ಸಾಂಪ್ರದಾಯ ಸಿದ್ಧ ಮಾಡುವ ಗುರು ನಮ್ಮೈಯ್ಯ 2 

ಸೆಳೆದು ಒಗೆವ ವ್ಯಾಳೆವ್ಯಾಳಗಯ್ಯ ತೊಳೆದು ಅಹಂಭಾವದ ಕಲೆಯ ಕೊಳ್ಳದೆ ಒಗೆವಾ ತಾ ಕೂಲಿಯ ಬಿಳಿದು ಮಾಡುವ ಮೂಳೆ ಕಳಿಯ 3 

ಆಶಿ ಎಂಬುದ ಹಾಸಿ ಒಣಗಿಸಿ ಹಸನಾಗಿ ಘಳಿಗೆ ಕೂಡಿಸಿ ಭಾಸಿ ಕೊಡುವ ತಾ ಘಟ್ಟಿಸಿ ಲೇಸು ಲೇಸಾಗಿ ಅನುಭವಿಸಿ 4 

ಶುದ್ಧ ಮಾಡಿದ ಮನ ನಿಶ್ಚಯ ಸಿದ್ಧ ಸಾಕ್ಷಾತ್ಕಾರ ನಮ್ಮಯ್ಯ ಸದ್ಬೋಧಿಸಿದ ಙÁ್ಞನೋದಯಸದ್ಗೈಸಿದ ಮಹಿಪತಿಯ 5

****