ಜ್ಞಾನ ಗುರು ಶುದ್ಧ ಮಡಿವಾಳ ಮನ ಮೈಲಿ ತೊಳೆವ ನಿರ್ಮಳ ಪ
ದೃಢ ಮಾಡುವ ಬಂಡೆಗಲ್ಲು ತೊಡೆವ ಸುಭೋಧ ಸಬಕಾರ ಮೇಲು ಹಿಡಿದು ಹಿಂಡುವ ಮನ ಮೈಲು ಕುಡುವ ವೈರಾಗ್ಯದ ಬಿಸಿಲು 1
ಉದ್ದಿ ಒರಸುವ ಸಬಕಾರ ಕೈಯ ಎದ್ದಿ ವಿವೇಕ ಉದರ ನಿಶ್ಚಯ ಶುದ್ಧದೋರಿಸಿ ಸಾಂಪ್ರದಾಯ ಸಿದ್ಧ ಮಾಡುವ ಗುರು ನಮ್ಮೈಯ್ಯ 2
ಸೆಳೆದು ಒಗೆವ ವ್ಯಾಳೆವ್ಯಾಳಗಯ್ಯ ತೊಳೆದು ಅಹಂಭಾವದ ಕಲೆಯ ಕೊಳ್ಳದೆ ಒಗೆವಾ ತಾ ಕೂಲಿಯ ಬಿಳಿದು ಮಾಡುವ ಮೂಳೆ ಕಳಿಯ 3
ಆಶಿ ಎಂಬುದ ಹಾಸಿ ಒಣಗಿಸಿ ಹಸನಾಗಿ ಘಳಿಗೆ ಕೂಡಿಸಿ ಭಾಸಿ ಕೊಡುವ ತಾ ಘಟ್ಟಿಸಿ ಲೇಸು ಲೇಸಾಗಿ ಅನುಭವಿಸಿ 4
ಶುದ್ಧ ಮಾಡಿದ ಮನ ನಿಶ್ಚಯ ಸಿದ್ಧ ಸಾಕ್ಷಾತ್ಕಾರ ನಮ್ಮಯ್ಯ ಸದ್ಬೋಧಿಸಿದ ಙÁ್ಞನೋದಯಸದ್ಗೈಸಿದ ಮಹಿಪತಿಯ 5
****
No comments:
Post a Comment