Showing posts with label ಬಲದ ಅಜಾನುಕರ ಮೊದಲು ಪ್ರದಕ್ಷಿಣದಿ prasannashreenivasa. Show all posts
Showing posts with label ಬಲದ ಅಜಾನುಕರ ಮೊದಲು ಪ್ರದಕ್ಷಿಣದಿ prasannashreenivasa. Show all posts

Thursday, 5 August 2021

ಬಲದ ಅಜಾನುಕರ ಮೊದಲು ಪ್ರದಕ್ಷಿಣದಿ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru


ಬಲದ ಅಜಾನುಕರ ಮೊದಲು ಪ್ರದಕ್ಷಿಣದಿ

ಸಲಿಲಜಾದಿಧರರಮಾಪತೇ ನಮಸ್ತೇ ಪ


ಅರವಿಂದ -ಶಂಖ ಸುದರ್ಶನ ಕೌಮೋದಕೀ

ಧರನಮೋ ಕೇಶವ ಶ್ರೀಶ ಬ್ರಹ್ಮೇಶ 1

ದರಾಂಬುಜಗದಾಚಕ್ರಧರಶ್ರೀಶ ನಮೋ

ನಾರಾಯಣ ದೋಷದೂರಗುಣಪೂರ್ಣ 2

ಕೌಮೋದಕೀಚಕ್ರದರಕಮಲಹಸ್ತನೇ

ನಮೋ ಮಾಧವ ಲಕ್ಷ್ಮೀರಮಣ ಮಾಂ ಪಾಹಿ 3

ಚಕ್ರ ಕೌಮೋದಕೀ ಪ್ರಫುಲ್ಲ ಅರವಿಂದ

ಶಂಖ ಧರ ಗೋವಿಂದ ನಮೋ ವೇದವೇದ್ಯ 4

ಗದಾಸರೋರುಹಶಂಖಚಕ್ರಧರವಿಷ್ಣೋ

ಮೋದಮಯ ಸರ್ವತ್ರ ಬಹಿರಂತವ್ರ್ಯಾಪ್ತ 5

ಸಹಸ್ರಾರ ಶಂಖಾಬ್ಜ ಗದಾಧರ ನಮಸ್ತೇ

ಪಾಹಿ ಮಧುಸೂಧನ ಮಹಾರ್ಹ ಹಯಶೀರ್ಷ 6

ಅಂಬುಜಗದಾಚಕ್ರ ಶಂಖೀ ತ್ರಿವಿಕ್ರಮನೆ

ಪುಷ್ಪಜಾರ್ಚಿತ ತ್ರಿಪದ ನಮೋ ವಿಶ್ವರೂಪ 7

ಶಂಖಾರಿ ಕೌಮೋದಕೀ ಪದ್ಮ ಹಸ್ತನೇ

ಮಂಗಳ ಸುಸೌಂದರ್ಯ ವಾಮನ ನಮಸ್ತೇ 8

ಇಂದೀವರಾರಿಗದಾಶಂಖೀ ನಮಸ್ತೇ

ಶ್ರೀಧರ ಸದಾ ನಮೋ ಶ್ರೀವತ್ಸ ಪಾಹಿ 9

ಗದಾ ಚಕ್ರ ಪದ್ಮಧರಾ ಹಸ್ತ ಹೃಷಿಕೇಶ

ಇಂದ್ರಿಯ ನಿಯಾಮಕ ದೇವದೇವೇಶ 10

ಶಂಖಾಬ್ಜರಿಗದಾಧರಪದ್ಮನಾಭ

ಅಕಳಂಕ ಮಹಿಮ ಜಗಜ್ಜನ್ಮಾದಿಕರ್ತ 11

ಕಮಲಧರ ಕೌಮೋದಕೀ ಚಕ್ರೀ ಈಶ

ದಾಮೋದರ ದೇವ ಸುಜ್ಞಾನದಾತ 12

ಕೌಮೋದಕೀ ಶಂಖ ಅಬ್ಜಾರಿಪಾಣಿನ್

ಮಮ ಪಾಪಹರ ಸಂಕರ್ಷಣ ಜಯೇಶ 13

ಗದಾಶಂಖ ಚಕ್ರಾಬ್ಜಹಸ್ತ ಮಾಯೇಶ

ಸದಾ ನಮೋ ಳಾಳುಕ ಡರಿ ವಾಸುದೇವ 14

ರಥಾಂಗ ಕಂಬು ಗದಾ ಕಮಲಧರ ಪ್ರದ್ಯುಮ್ನ

ಕೃತಿದೇವಿರಮಣ ನಮೋ ಭಾಸ್ವ ಮದ್ ಹೃದಯೇ 15

ರಥಾಂಗ ಗದಾಕಂಬು ಕಮಲ ಹಸ್ತ ನಮೋ

ಶಾಂತೀಶ ಅನಿರುದ್ಧ ಶರಣು ಮಾಂ ಪಾಹಿ 16

ಅರಿ ಕಮಲ ಶಂಖ ಗದಾಧರ ಪುರುಷೋತ್ತಮ

ಕ್ಷರಾ ಕ್ಷರೋತ್ತಮ ಪೂರುಷ ಸ್ವತಂತ್ರ ನಮೋ ಪಾಹಿ 17

ಪದ್ಮ ಗದಾ ಶಂಖಾರಿಧರ ಅಧೋಕ್ಷಜ ನಮೋ

ಮೋದಮಯ ಕಪಿಲ ಭಾಮನ ಡರಕ ವಿಶ್ವ 18

ಚಕ್ರಾಬ್ಜ ಗದಾ ಶಂಖ ಭಕ್ತ ರಕ್ಷಕ ನಮೋ

ಸದಾನಂದ ಚಿನ್ಮಯ ಅನಘ ಅವಿಕಾರಿ 19

ಅಬ್ಜಾರಿ ಶಂಖ ಗದಾಧರ ಜನಾರ್ಧನ ನಮೋ

ಅಜಿತ ಅಜ ಸಂಸಾರ ಬಂಧ ಹರ ಸುಖದಾ 20

ದರಗದಾ ಅರಿ ಅಬ್ಜ ಧರ ಉಪೇಂದ್ರ ನಮೋ

ಇಂದ್ರಾನುಜನೇ ಬ್ರಹ್ಮ ರುದ್ರಾದಿ ವಂದ್ಯ 21

ದರ ಸುದರ್ಶನ ಕಮಲ ಕೌಮೋದಕೀ ಪಿಡಿದ

ಹರಿ ಶ್ರೀಯಃಪತಿ ಅಭಯ ವರದನೇ ಶರಣು 22

ಶಂಖ ಕೌಮೋದಕೀ ಅಬ್ಜಾರಿಧರ ಕೃಷ್ಣ

ಸುಖಜ್ಞಾನ ಚೇಷ್ಟಾ ರೂಪ ನಮೋ ಶ್ರೀಶ 23

ಮಧ್ವ ಹೃದ್ವನಜಸ್ಥ ಚತುರ್ವಿಂಶತಿ ರೂಪ

ಉದ್ದಾಮ ಪರಮಾರ್ತ ಹರಿ ಶ್ರೀಶ ಶರಣು 24

ಮತ್ಸ್ಯ ಕೂರ್ಮ ಕ್ರೋಡ ನರಸಿಂಹ ವಟು ರೇಣು -

ಕಾತ್ಮಜ ಶ್ರೀರಾಮ ಕೃಷ್ಣ ಶಿಶು ಕಲ್ಕಿ 25

ಆನಂದಚಿನ್ಮಯ ಅನಂತ ರೂಪನೇ ನಮೋ

ವನಜಭವಪಿತ ಶ್ರೀ ಪ್ರಸನ್ನ ಶ್ರೀನಿವಾಸನೇ ನಮೋ 26

***