ಕಲ್ಲೂರು ತಮ್ಮಣ್ಣ ದಾಸರ ಕೃತಿ
ಗುರುರಾಘವೇಂದ್ರ ನೀ ಕರುಣಿಸಿ ನೋಡಬಾರದೆ l
ಮೊರೆ ಯಾರಿಗಿಡಲ್ಯೋ ನಾ ಕರುಣಾಶರಧೆ ll ಪ ll
ಸ್ಮರಿಸಿದವರ ಪೊರೆವೆನೆಂದು ನಿನ್ನ ಬಿರಿದೆ l
ವರ ಶರಣ ಕಲ್ಪತರುವೆ
ಯೆನ್ನ ಯಾಕೆ ಮರದೆ ll ೧ ll
ಕರಮುಗಿದು ನಮಿಸಿ ನಿನಗೆ ಬಾಯಿ ತೆರೆದೆ ಇದು l
ಸರಿಯೆ ನಿನ್ನ ಮನಸು ಲೇಶವಾದರು ಮರುಗದೆ ll ೨ ll
ನಿರುತ ಎನ್ನ ಅವಗುಣಗಳನ್ನು ಮನಕೆ ತಾರದೆ ಬಂದು l
ಪೊರೆವ ರಘುನಾಥವಿಟ್ಠಲ ಕೃಪೆಯು ಬಾರದೆ ll ೩ ll
***