Showing posts with label ಇದೇವೆ ಪೂಜೆಯು ನೋಡಿ ಹೃದಯದಲಿ mahipati. Show all posts
Showing posts with label ಇದೇವೆ ಪೂಜೆಯು ನೋಡಿ ಹೃದಯದಲಿ mahipati. Show all posts

Thursday, 12 December 2019

ಇದೇವೆ ಪೂಜೆಯು ನೋಡಿ ಹೃದಯದಲಿ ankita mahipati

ಭೈರವಿ ರಾಗ ದೀಪಚಂದಿತಾಳ

ಇದೇವೆ ಪೂಜೆಯು ನೋಡಿ ,
ಹೃದಯದಲಿ ಒಡಗೂಡಿ ||ಧ್ರುವ ||

ಮೂರ್ತಿ ಎಂಬುದೇ ಅಮೂರ್ತಿ
ನಾಮಸ್ವರೂಪ ನಿಜಗುಹ್ಯವಾರ್ತಿ
ವ್ಯೋಮಾಕಾರದ ಮನೆಮೂರ್ತಿ
ಸ್ವಾಮಿ ಸದ್ಗುರುವಿನ ಕೀರ್ತಿ ||೧||

ನಿತ್ಯ ನಿರ್ಗುಣ ನಿರ್ವಿಕಲ್ಪ
ಸತ್ಯ ಸದ್ಗುರು ಸ್ವರೂಪ
ನಿತ್ಯನಿತ್ಯ ನಿತ್ಯರ್ಥ ಸುದೀಪ
ತತ್ವಜ್ಞಾನ ಮನ ಮಂಟಪ ||೨||

ಸ್ವಾನುಭವ ಸ್ವಾದೋದಕ
ಜ್ಞಾನಭಾಗೀರಥಿ ಅಭಿಷೇಕ
ಮೌನಮೌನ್ಯ ವಸ್ತ್ರಾಮೋಲಿಕಾ
ಧ್ಯಾನವೆಂಬುದೇ ಸೇವೆ ಅನೇಕ ||೩||

ಗಂಧಾಕ್ಷತಿ ಪರಿಮಳವುಳ್ಳ ಪುಷ್ಪ
ಬುದ್ಧಿಮನವಾಯಿತು ಸ್ವರೂಪ
ಸದ್ವಾಸನ್ಯಾಯಿತು ಧೂಪಧೀಪ
ಸದ್ಭಾವನೆ ನೈವೇದ್ಯಮೋಪ ||೪||

ಫಲತಾಂಬೂಲವೆ ಸದ್ಭಕ್ತಿ
ಮೂಲಭಿಭಾವನೆ ಮಂಗಳಾರ್ತಿ
ಬಾಲಕ ಮಹಿಪತಿ ನಿಜಪೂಜಿಸ್ಥಿತಿ
ಕುಲಕೋಟಿ ಉದ್ಧರಿಸುವ ಗತಿ ||೫||
*******