ಪುರಂದರದಾಸರು
ರಾಯನ ನೋಡಿರೋ ಮಧ್ವ ರಾಯನ ಪಾಡಿರೊ ಪ
ಅಂಜನೆಯಲಿ ಹುಟ್ಟಿ ಅಂಬರಕಡರಿದಹರಿಯೋ - ಸಿಂಹದ - ಮರಿಯೋ |ಕಂಜಾಕ್ಷಿಯ ಸುದ್ದಿಗೆ ಶರಧಿಯ ಲಂಘಿಸಿದ-ಪುರ- ಸಂಧಿಸಿದಅಂಜದೆ ವನವನು ಕಿತ್ತಿದ ಪುರವನುಸುಟ್ಟ - ತಾ ಬಲು - ದಿಟ್ಟಾ |ಸಂಜೀವನ ಗಿರಿ ತಂದು ವಾನರರಪೊರೆದಾ - ರಾಮನ - ಬೆರೆದಾ 1
ಕುಂತಿ ಕುಮಾರನು ಶೀಮೆಗೆ ಹರುಷದಿಬೆಳೆದ - ಖಳರನು - ತುಳಿದ |ಅಂತ ಕೌರವ - ದುಶ್ಯಾಸನರಾ ಶಿರತರೆದಾ - ಚಲವನು - ಮೆರೆದ |ಸಂತಾಪವ ಪಡಿಸಿದ ಕುಜನಕೆ ಭೀಮ -ನಾದ -ಸನ್ನುತ- ನಾದ |ಕಂತುಜನಕಶ್ರೀ ಕೃಷ್ಣನ ಪಾದದಿಬಿದ್ದ - ಮದಗಜ - ಗೆದ್ದ 2
ಮುನಿಕುಲದಲಿ ಉದಿಸಿದ ಗುರುಮಧ್ವ ತಾನಾದ - ಧರೆಯಲಿ - ಮೆರೆದ |ಅನಿಮಿಷರೊಡೆಯ ಶ್ರೀವೇದವ್ಯಾಸರಚರಣ-ಅನುದಿನ- ಸ್ಮರಣ |ಕನಸೊಳು ಕಾಣದ ಅದ್ವೈತಂಗಳಮುರಿದ - ತತ್ತ್ವ - ತೋರಿದ |ಘನಮಹಿಮ ಶ್ರೀಪುರಂದರವಿಠಲನದಾಸ - ಪಡೆದ - ಸನ್ಯಾಸ 3
*******