Showing posts with label ಆನಂದ ಆನಂದ ಆನಂದ ಆನಂದ ನಿನ್ನ ನೋಡಿದವರಿಗೆ others ANANDA ANANDA ANANDA AANANDA NINNA NODIDAVARIGE. Show all posts
Showing posts with label ಆನಂದ ಆನಂದ ಆನಂದ ಆನಂದ ನಿನ್ನ ನೋಡಿದವರಿಗೆ others ANANDA ANANDA ANANDA AANANDA NINNA NODIDAVARIGE. Show all posts

Tuesday, 5 October 2021

ಆನಂದ ಆನಂದ ಆನಂದ ಆನಂದ ನಿನ್ನ ನೋಡಿದವರಿಗೆ ankita others ANANDA ANANDA ANANDA AANANDA NINNA NODIDAVARIGE



ಹಾಡು: ಆನಂದ ಆನಂದ ನಿನ್ನ ನೋಡಿದವರಿಗೆ

ರಚನೆ: ಶ್ರೀ ನಾರಾಯಣ ತೀರ್ಥರು / ನಾರಾಯಣ ಶರ್ಮ 

ನಾರಾಯಣ ತೀರ್ಥರ ಈ ಕೃತಿಯ ವಿಶೇಷವೇನಂದರೆ, ಪಲ್ಲವಿ ಒಂದು ತಾಳದಲ್ಲಿದ್ದು (ತ್ರಿಶ್ರ ತಾಳ) ಚರಣಗಳು ಮತ್ತೊಂದು ತಾಳದಲ್ಲಿದೆ (ಮಿಶ್ರ ಛಾಪು ತಾಳ)


ಆನಂದ ಆನಂದ ಆನಂದ ಪ


ಆನಂದ ನಿನ್ನ ನೋಡಿದವರಿಗೆ ಅ.ಪ


ಆ ಮುಖ ಆ ಕಂಠವಾನಂದ

ಆ ಮಹಾಭುಜಕೀರ್ತಿ ಆನಂದ

ಸಾಮಜ ಶಂಖಚಕ್ರಗಳಾನಂದ

ಹೊಮ್ಮುವ ಗದೆ ಹಸ್ತ ಜಗದಾನಂದ 1


ಸುರಾಸುರರು ದೇವಾನುದೇವರು ತಂ-

ಬುರ ನಾರದ ಮೊದಲಾದವರು

ವರುಣಿಸಲಾರರು ನಿನ್ನಳವನ್ನು

ಅರಿಯಲು ಪೊಗಳಲು ಆನಂದವನ್ನು 2


ಸಂಖ್ಯೆಗೆ ಎಟುಕದ ಆನಂದವಯ್ಯ

ಅಂಕೆಗೆ ನಿಲುಕದ ಆನಂದವಯ್ಯ

ಅಂಕುಡೊಂಕಿಲ್ಲದ ಆನಂದವಯ್ಯ

ಬಿಂಕವ ಬಿಟ್ಟು ಪಾಡಿರೋ ಅಯ್ಯ 3


ಕಮಲವದನದ ಚೆಲುವಾನಂದ

ಕಮಲಲೋಚನದ ಸುಂದರ ಅಂದ

ಕಮಲೋದ್ಭವನಿಹ ವಕ್ಷವಾನಂದ

ಕಮಲಯುಗಳ ಶ್ರೀಪಾದವಾನಂದ 4


ಎಣೆಯಿಲ್ಲಾನಂದಕೆ ಎಣೆಯಿಲ್ಲವಯ್ಯ

ಕಣಕಣವು ನೋಡಲು ತಣಿಯದವಯ್ಯ

ಅಣಿಗೊಂಡ ಜಾಜಿಪುರೀಶನವ್ವಯ್ಯ

ವರ್ಣಿಸಲಾನು ಪಾಮರನಯ್ಯ 5

****