Showing posts with label ತಿಂಗಳಿಗೆ ತಿಂಗಳಿಗೆ ankita pranesha vittala ದ್ವಾದಶಾದಿತ್ಯರ ಸ್ತೋತ್ರ TINGALIGE TINGALIGE DWADASHAADITYA STOTRA. Show all posts
Showing posts with label ತಿಂಗಳಿಗೆ ತಿಂಗಳಿಗೆ ankita pranesha vittala ದ್ವಾದಶಾದಿತ್ಯರ ಸ್ತೋತ್ರ TINGALIGE TINGALIGE DWADASHAADITYA STOTRA. Show all posts

Monday, 8 March 2021

ತಿಂಗಳಿಗೆ ತಿಂಗಳಿಗೆ ankita pranesha vittala ದ್ವಾದಶಾದಿತ್ಯರ ಸ್ತೋತ್ರ TINGALIGE TINGALIGE DWADASHAADITYA STOTRA


 Audio by Mrs. Nandini Sripad

ಶ್ರೀಪ್ರಾಣೇಶದಾಸರ ಕೃತಿ  ದ್ವಾದಶಾದಿತ್ಯರ ಸ್ತೋತ್ರ ಪದ 


 ರಾಗ ಹಂಸಾನಂದಿ 


 ಭಾಮಿನಿ ಷಟ್ಪದಿ 


ತಿಂಗಳಿಗೆ ತಿಂಗಳಿಗೆ ಬರುತಿಹ

ಪಿಂಗಳರ ನಾಮವನು ಬರೆವೆನು

ಇಂಗಿತಜ್ಞರು ಕೇಳ್ವುದು ಉದಾಶನವ ಮಾಡದಲೆ ॥ ಪ ॥ 


 ಧಾತ ಚೈತ್ರಕೆ ಆರ್ಯಮಾ ಯೆಂ -।

ಬಾತ ವೈಶಾಖಕೆ ಸುಜೇಷ್ಠಕೆ ।

ನಾಥನೆನಿಸುವ ಮಿತ್ರ ಆಷಾಢಕ್ಕೆ ಬಹ ವರುಣ ॥

ಖ್ಯಾತನಾಗಿಹ ಶ್ರಾವಣಕೆ ಪುರು -।

ಹೂತ ಭಾದ್ರಪದಕೆ ವಿವಸ್ವಾನ್ ।

ಭೂತಿಯುತನಾಗಿರುವ ತ್ವಷ್ಟ್ರಾಶ್ವೀನ ಮಾಸದಲಿ ॥ 1 ॥ 


 ಹರಿ ದಿನಪ ಕಾರ್ತೀಕ ಮಾಸದಿ ।

ಇರುತಿಹನು ಮಾರ್ಗಶಿರದಿ ಸವಿತೃ ।

ವರದ ಭಗ ಪುಷ್ಯದಲಿ ಪೂಷಾ ಮಾಘಮಾಸದಲಿ ॥

ಸುರನದಿಯೆ ಮೊದಲಾಗಿಹೆ ಐ - ।

ವರಿಗೆ ಸಮ ಪರ್ಜನ್ಯ ಫಾಲ್ಗುಣ - ।

ಕರಿತು ಇಂತು ಯಥಾವಿಧಿಯೊಳರ್ಘ್ಯವನು ಕೊಟ್ಟು ಜಪವ ॥ 2 ॥ 


ಮಾಡುತಿಹ ಧನ್ಯರಿಗೆ ಪಾಪಗ - ।

ಳೋಡಿಸುತ ದಯದಿಂದ ಏನೇನ್ ।

ಬೇಡಿದಿಷ್ಟವ ಕೊಟ್ಟು ಕರ್ಮಕೆ ಸಾಕ್ಷಿ ತಾನಾಗಿ ।

ಮಾಡುವನು ಸಂರಕ್ಷಣೆಯ ।

ಒಡನಾಡುವನು ಬಿಡನೊಂದರೆಕ್ಷಣ ।

ಈಡು ಇಲ್ಲದ ಮಹಿಮ ಶ್ರೀಪ್ರಾಣೇಶವಿಟ್ಠಲನು ॥ 3 ॥

****


ತಿಂಗಳಿಗೆ ತಿಂಗಳಿಗೆ ಬರುತಿಹ | ಪಿಂಗಳರ ನಾಮವನು ಬರೆವೆನು |ಇಂಗಿತಜÕರು ಕೇಳ್ವುದು ಉದಾಶನವ ಮಾಡದಲೆ ಪ

ಧಾತ ಚೈತ್ರಕೆ ಆರ್ಯಮಾಯೆಂಬಾತ ವೈಶಾಖಕೆ ಸುಜೇಷ್ಠಕೆ |ನಾಥನೆನಿಸುವಮಿತ್ರಆಷಾಢಕ್ಕೆ ಬಹ ವರುಣ ||ಖ್ಯಾತನಾಗಿಹ ಶ್ರಾವಣಕೆಪುರುಹೂತಭಾದ್ರಪದಕೆ ವಿವಸ್ವಾನೆ |ಭೂತಿಯುತನಾಗಿರುವ ತ್ವಷ್ಟ್ರಾಶ್ವೀನ ಮಾಸದಲಿ 1

ಹರಿದಿನಪ ಕಾರ್ತೀಕ ಮಾಸದಿ |ಇರುತಿಹನು ಮಾರ್ಗಶಿರದಿಸವಿತೃ|ವರದ ಭಗ ಪುಷ್ಯದಲಿ ಪೂಷಾ ಮಾಘಮಾಸದಲಿ ||ಸುರನದಿಯೆ ಮೊದಲಾಗಿಹ ಐ |ವರಿಗೆ ಸಮಪರ್ಜನ್ಯ ಫಾಲ್ಗುಣ |ಕರಿತು ಇಂತು ಯಥಾವಿಧಿಯೊಳಘ್ರ್ಯವನು ಕೊಟ್ಟು ಜಪವ 2

ಮಾಡುತಿಹ ಧನ್ಯರಿಗೆ ಪಾಪಗ |ಳೋಡಿ ಸುತ ದಯದಿಂದ ಯೇನೇನೆ |ಬೇಡಿದಿಷ್ಟವ ಕೊಟ್ಟು ಕರ್ಮಕೆ ಸಾಕ್ಷಿ ತಾನಾಗಿ ||ಮಾಡುವನು ಸಂರಕ್ಷಣೆಯ ಒಡ | ನಾಡುವನುಬಿಡನೊಂದರೆಕ್ಷಣ |ಈಡುಇಲ್ಲದ ಮಹಿಮಶ್ರೀ ಪ್ರಾಣೇಶ ವಿಠಲನು 3
***