Audio by Mrs. Nandini Sripad
ಶ್ರೀಪ್ರಾಣೇಶದಾಸರ ಕೃತಿ ದ್ವಾದಶಾದಿತ್ಯರ ಸ್ತೋತ್ರ ಪದ
ರಾಗ ಹಂಸಾನಂದಿ
ಭಾಮಿನಿ ಷಟ್ಪದಿ
ತಿಂಗಳಿಗೆ ತಿಂಗಳಿಗೆ ಬರುತಿಹ
ಪಿಂಗಳರ ನಾಮವನು ಬರೆವೆನು
ಇಂಗಿತಜ್ಞರು ಕೇಳ್ವುದು ಉದಾಶನವ ಮಾಡದಲೆ ॥ ಪ ॥
ಧಾತ ಚೈತ್ರಕೆ ಆರ್ಯಮಾ ಯೆಂ -।
ಬಾತ ವೈಶಾಖಕೆ ಸುಜೇಷ್ಠಕೆ ।
ನಾಥನೆನಿಸುವ ಮಿತ್ರ ಆಷಾಢಕ್ಕೆ ಬಹ ವರುಣ ॥
ಖ್ಯಾತನಾಗಿಹ ಶ್ರಾವಣಕೆ ಪುರು -।
ಹೂತ ಭಾದ್ರಪದಕೆ ವಿವಸ್ವಾನ್ ।
ಭೂತಿಯುತನಾಗಿರುವ ತ್ವಷ್ಟ್ರಾಶ್ವೀನ ಮಾಸದಲಿ ॥ 1 ॥
ಹರಿ ದಿನಪ ಕಾರ್ತೀಕ ಮಾಸದಿ ।
ಇರುತಿಹನು ಮಾರ್ಗಶಿರದಿ ಸವಿತೃ ।
ವರದ ಭಗ ಪುಷ್ಯದಲಿ ಪೂಷಾ ಮಾಘಮಾಸದಲಿ ॥
ಸುರನದಿಯೆ ಮೊದಲಾಗಿಹೆ ಐ - ।
ವರಿಗೆ ಸಮ ಪರ್ಜನ್ಯ ಫಾಲ್ಗುಣ - ।
ಕರಿತು ಇಂತು ಯಥಾವಿಧಿಯೊಳರ್ಘ್ಯವನು ಕೊಟ್ಟು ಜಪವ ॥ 2 ॥
ಮಾಡುತಿಹ ಧನ್ಯರಿಗೆ ಪಾಪಗ - ।
ಳೋಡಿಸುತ ದಯದಿಂದ ಏನೇನ್ ।
ಬೇಡಿದಿಷ್ಟವ ಕೊಟ್ಟು ಕರ್ಮಕೆ ಸಾಕ್ಷಿ ತಾನಾಗಿ ।
ಮಾಡುವನು ಸಂರಕ್ಷಣೆಯ ।
ಒಡನಾಡುವನು ಬಿಡನೊಂದರೆಕ್ಷಣ ।
ಈಡು ಇಲ್ಲದ ಮಹಿಮ ಶ್ರೀಪ್ರಾಣೇಶವಿಟ್ಠಲನು ॥ 3 ॥
****
ತಿಂಗಳಿಗೆ ತಿಂಗಳಿಗೆ ಬರುತಿಹ | ಪಿಂಗಳರ ನಾಮವನು ಬರೆವೆನು |ಇಂಗಿತಜÕರು ಕೇಳ್ವುದು ಉದಾಶನವ ಮಾಡದಲೆ ಪ
ಧಾತ ಚೈತ್ರಕೆ ಆರ್ಯಮಾಯೆಂಬಾತ ವೈಶಾಖಕೆ ಸುಜೇಷ್ಠಕೆ |ನಾಥನೆನಿಸುವಮಿತ್ರಆಷಾಢಕ್ಕೆ ಬಹ ವರುಣ ||ಖ್ಯಾತನಾಗಿಹ ಶ್ರಾವಣಕೆಪುರುಹೂತಭಾದ್ರಪದಕೆ ವಿವಸ್ವಾನೆ |ಭೂತಿಯುತನಾಗಿರುವ ತ್ವಷ್ಟ್ರಾಶ್ವೀನ ಮಾಸದಲಿ 1
ಹರಿದಿನಪ ಕಾರ್ತೀಕ ಮಾಸದಿ |ಇರುತಿಹನು ಮಾರ್ಗಶಿರದಿಸವಿತೃ|ವರದ ಭಗ ಪುಷ್ಯದಲಿ ಪೂಷಾ ಮಾಘಮಾಸದಲಿ ||ಸುರನದಿಯೆ ಮೊದಲಾಗಿಹ ಐ |ವರಿಗೆ ಸಮಪರ್ಜನ್ಯ ಫಾಲ್ಗುಣ |ಕರಿತು ಇಂತು ಯಥಾವಿಧಿಯೊಳಘ್ರ್ಯವನು ಕೊಟ್ಟು ಜಪವ 2
ಮಾಡುತಿಹ ಧನ್ಯರಿಗೆ ಪಾಪಗ |ಳೋಡಿ ಸುತ ದಯದಿಂದ ಯೇನೇನೆ |ಬೇಡಿದಿಷ್ಟವ ಕೊಟ್ಟು ಕರ್ಮಕೆ ಸಾಕ್ಷಿ ತಾನಾಗಿ ||ಮಾಡುವನು ಸಂರಕ್ಷಣೆಯ ಒಡ | ನಾಡುವನುಬಿಡನೊಂದರೆಕ್ಷಣ |ಈಡುಇಲ್ಲದ ಮಹಿಮಶ್ರೀ ಪ್ರಾಣೇಶ ವಿಠಲನು 3
***
No comments:
Post a Comment