Showing posts with label ನಂಬಿದೆ ನಾ ನಿನ್ನ ನಾರಾಯಣ ವಿಶ್ವಂಭರ gururama vittala. Show all posts
Showing posts with label ನಂಬಿದೆ ನಾ ನಿನ್ನ ನಾರಾಯಣ ವಿಶ್ವಂಭರ gururama vittala. Show all posts

Tuesday, 13 April 2021

ನಂಬಿದೆ ನಾ ನಿನ್ನ ನಾರಾಯಣ ವಿಶ್ವಂಭರ ankita gururama vittala

ನಂಬಿದೆ ನಾ ನಿನ್ನ ನಾರಾಯಣ ವಿಶ್ವಂಭರ ಮೂರುತಿಯೇ

ಕಂಬುಧರ ಕಮಲಾಂಬಕ ಶ್ರೀಹರಿ ಪಾರ್ಥನ ಸಾರಥಿಯೇ ll ಪ ll


ವಾರಿಜನಾಭನೆ ಪಾರುಗಾಣಿಸೊ ಸಂ-

ಸಾರ ಶರಧಿಯಿಂದ

ಮಾರಮಣನೆ ಮೊರೆಹೊಕ್ಕೆ ಲಾಲಿಸೊ

ಮುರಹರ ಗೋವಿಂದ ll 1 ll


ಪುಣ್ಯಪುರುಷ ಲಾವಣ್ಯ ನಿಧಿಯೆ ಕಾ-

ರುಣ್ಯ ಸುಗುಣ ಸಾಂದ್ರ

ಸನ್ನುತಿಗಯ್ಯಲು ಶೇಷಗಳವೆ

ವನಜಾಪ್ತವಂಶ ಚಂದ್ರ ll 2 ll


ಕಾಮ ಜನಕ ಸುತ್ರಾಮವಿನುತ ಶುಭ-

ನಾಮಸುಜನಪ್ರೇಮಿ

ತಾಮಸದೂರ ಸುಧಾಮವರದ ಗುರು-

ರಾಮವಿಟ್ಠಲಸ್ವಾಮಿ ll 3 ll

***