Showing posts with label ನೋಡಿದೆನು ತಿರುವೆಂಗಳೇಶನಾ ಮಾಡಿದೆನು vijaya vittala. Show all posts
Showing posts with label ನೋಡಿದೆನು ತಿರುವೆಂಗಳೇಶನಾ ಮಾಡಿದೆನು vijaya vittala. Show all posts

Wednesday, 16 October 2019

ನೋಡಿದೆನು ತಿರುವೆಂಗಳೇಶನಾ ಮಾಡಿದೆನು ankita vijaya vittala

ವಿಜಯದಾಸ
ನೋಡಿದೆನು ತಿರುವೆಂಗಳೇಶನಾ
ಮಾಡಿದೆನು ಭಕುತಿಯಲಿ ವಂದನೆ
ಬೇಡಿದೆನು ಕೊಂಡಾಡಿ ವರಗಳ
ನಾಡೊಳಗೆ ಈಡಿಲ್ಲದಪ್ಪನಾ ಪ
ಘನಸುಂದರ ಜ್ಞಾನ ತೀರ್ಥ ಆನಂದ
ಧನ ವರಹಾ ವೈರಾಗ್ಯನಿಲಿ ರ
ತುನ ಚಂದ್ರಮ ವರಧÀರ್ಮ ನಾರಾ
ಯಣ ಭಕುತಿ ಶ್ರೀಕಾಂತಿ ಬ್ರಹ್ಮಾ
ರುಣ ವೃಷಭ ಶ್ರುತಿ ಗರುಡ ಸರ್ಪ
ಜನತ ಪೂಜಿಪ ಸುರ ಸುಧಾನಂತ
ಇನಿತು ಪೆಸರುಳ್ಳ ಪುಷ್ಕರಾದ್ರಿಯಾ1

ಖಗನ ಪೆಗಲಲಿ ನಗವ ತಂದ
ಜಗದೊಳು ಸುವರ್ಣಮುಖರಿ ನಿ
ಮ್ನಗ ತೀರದಲಿ ಸ್ಥಾಪಿಸಿದ ಸುತ್ತಲು
ಝಗಝಗಿಸುದೆ ನೋಳ್ಪ ಜನರಿಗೆ
ಹಿಮ್ಮೊಗವಾಗಿ ಪೋದವು
ಯುಗ ಯುಗ ಕಥಾಭೇದ ಬಗೆಬಗೆ
ಪೊಗಳಿದರೆ ನೆಲೆಗಾಣೆ ಅನುದಿನಾ 2

ಸರಸ್ವತಿಗೆ ಮುನಿಯಿಂದ ಶಾಪವು
ಬರಲು ಭರದಲಿ ಬಂದು ವಿರಜಾ
ಸರತಿಯೊಳು ಬೆರಸಿದಳ್ ತಪದಲಿ
ಹರಿಯ ಕರುಣವ ಪಡೆದು ಪ್ರತಿದಿನ
ಸ್ಮರಸಿದವರಿಗೆ ಪುಣ್ಯವೀವುತ
ಸರುವ ಸರೋವರಧಿಕವೆನಿಪ ಸುಂ
ದರ ಸ್ವಾಮಿ ಪುಷ್ಕರಣಿಯನು ತ್ರಿ
ಕರಣ ಬಲು ಒಂದಾಗಿಬಿಡದಲೆ 3

ಎರಡೈದು ಪ್ರಾಕಾರ ಗೋಪುರಾ
ಎರಡೈದು ದ್ವಾರಗಳು ಕಟ್ಟಿದಾ
ಮಕರ ತೋರಣ
ಧರೆಗೆ ಮಟ್ಟಿದ ಎಡಬಲದ ಪೂ
ಸರಗಳೊಪ್ಪಲು ದ್ವಾರಪಾಲಕರಿ
ರುತಿಪ್ಪರಲ್ಲೆಲ್ಲಿ ಕಾವುತಾ
ನಿಕರ ತುಂಬಿರೆ
ಪರಿಪರಿಯ ಮಂಟಪಗಳಿಂದಾ 4

ಭಂಗರಹಿತ ಬಂಗಾರಮಯವಾದಾ
ತುಂಗ ಆನಂದ ನಿಲಯ ವಿಮಾನಾ
ಕಂಗಗಳಿಗೆ ಬಲು ತೇಜಿಃಪುಂಜದಿ
ಹಿಂಗದಲೆ ಗೋಚರಿಸುತದೆ ನರ
ಸಿಂಗ ಮೂತ್ರ್ಯಾದಿಗಳು ಪ್ರಾಣ ಭು
ಜಂಗಧರಾದಿ ದಿಕ್ಪಾಲರೆಲ್ಲರು
ಸಂಗ ಮತಿಯಲಿ ವಾಸವಾಗಿರೆ
ಮಂಗಳಾಂಗ ಪ್ರಿಯಾಂಗ ಪ್ರಿಯನಾ 5

ಮುಕ್ತಿ ಬೀದಿಗಳೆರಡು ವಿ
ರಕ್ತಿ e್ಞÁನ ಸತ್ಕರ್ಮ ಬಲು ದೃಢ
ಭಕ್ತಿಯೋಗವು ಯಾವ ತ್ಯಾಗ ಸಂ
ವ್ಯಕ್ತ ರಾಗವು ಈಪರಿ ಸು
ಉಕ್ತಿ ದ್ವಾದಶ ಸಾಲ ಬೀದಿಗ
ಳುಕ್ತ ಜನ ಸಂಚರಿಸುತ್ತಿಪ್ಪರು
ಶಕ್ತನೊಬ್ಬನೆ ಜಗದೊಳೀತನೆ
ವ್ಯಕ್ತ ಅವ್ಯಕ್ತದಲಿ ಚಿತ್ರವಾ 6

ಲೋಕೇಶ ಲೋಕಪಾಲಕರು ಖಗ
ಕಾಕೋದರ ಗಂಧರ್ವ ಸನಕಾದಿ
ಲೋಕ ಚಕ್ಷು ಸೀತಾಂಶು ಉದಿಸಿದರು
ಏಕಾಂತನು ವಾಯುನಂದನ
ಪಾಕಶಾಸನ ಸೌಮ್ಯ ಗುರು ಕವಿ
ನಾಕಜನ ಮಿಗಿಲಾದ ಭಕ್ತರು
ಏಕಗುಣವಾರಂಭಿಸಿ ಅ
ನೇಕ ಗುಣದಲಿ ಭಜಿಸುತಿಪ್ಪುದಾ7

ಸಾರಿದರೆ ನೆಲೆದೋರದು ಕಂ
ಸಾರಿ ಚಿನ್ಮಯ ಲೀಲೆಗೆ ಮತ್ತಾರಾದರು ಗಣ್ಯಮಾಳ್ಪರೆ
ಧಾರುಣಿಲಿ ಮಧ್ಯದಲಿದಕೆ ಎ
ದಿರುಗಾಣೆನು ಎಲ್ಲಿ ಚರಿಸಲು
ಮಾರುತನು ತಾನೊಬ್ಬ ಬಲ್ಲ ವಿ
ಸ್ತಾರವಿದರ ವಿಚಾರ ಮತಿಯಲಿ8

ಧೀರ ಜಗದೋದ್ಧಾರ ರಿಪು ಸಂ
ಹಾರ ನಾನಾವತಾರ ನವನೀತ
ಜಾರ ಶಿರೋಮಣಿ ಶ್ರೀ
ನಾರಿಯರರಸನೆ ತಾ ಭಕ್ತ ಚ
ಕೋರ ಚಂದ್ರಮ ಪೂರ್ಣ ಸುಂದರ
ಸಾರ ಭವಾರ್ಣವತಾರ ಕಾರಣ
ವೀರ ವಿತರಣ ಶೂರನೆನಿಪನ್ನ
ದ್ವಾರದಲಿ ಬಂದು ಸ್ತುತಿಸಿದೆನು ನಿಂದೂ 9

ಈ ವೈಲಕ್ಷಣವುಳ್ಳ ದೊರೆತನ
ಈ ವೈಭವ ಸರ್ವೋತ್ತಮನೆಂಬದು
ಈ ವೈಭೋಗ ಸಾಕಲ್ಯವಾಗಿದೆ
ಈ ವೈಯಾರವು ಈತಗಲ್ಲದೆ
ಈ ವೈಕುಂಠನ ನೋಡುವುದು ಮಹಾ
ಈ ವೈದಿಕದ ಭಾಗ್ಯಕ್ಕೆಣೆಯೆ
ಈ ವೈಧಾತ್ರಿಗೆಯಿವನು ಪೇಳಿದ
ಈ ವೈಚಿತ್ರವ ಕೇಳಿ ಮನದಲಿ 10

ರನ್ನಮಯ ಕಿರೀಟ ಕುಂಡಲ
ಕರ್ಣ ಕಸ್ತೂರಿನಾಮ ಪಣೆಯಲಿ
ಕೆನ್ನೆ ಚಂಪಕ ನಾಸದಂತ ಪ್ರ
ಸನ್ನ ವದನಾಂಭೋಜಲೋಚನಾ
ಚಿನ್ನಸರ ಉಡುದಾರ ಸರಿಗೆ ಮೋ
ಹನ್ನ ಪೀತಾಂಬರ ನೂಪುರಗೆಜ್ಜೆ
ಸನ್ನಿಧಿಗೆ ನಡೆತಂದು ದೇವವರೇ
ಣ್ಯನಂಘ್ರಿಯ ನೆನೆದೆ ಚೆನ್ನಾಗಿ 11

ಮೆರೆವ ಉತ್ಸವ ವಾಹನಂಗಳು
ನೆರೆದ ಪ್ರಜೆದಟ್ಟಡಿಯಾಗಿದೆ ನೋಡಿ
ಎರಡೊಂದು ವಿಧದವರುಯಿಲ್ಲಿಗೆ
ಬರುವರೈ ಅವರವರ ತಕ್ಕದು
ಹರಿಯ ಫಲವನು ಕೊಡುವನಿಲ್ಲದೆ
ಅರಮರೆ ಇಲ್ಲಿದಕೆ ಎಂದಿಗು
ಮೊರೆವ ನಾನಾ ವಾದ್ಯ ರಭಸ ವಿ
ಸ್ತರಿಸ ಬಲ್ಲೆನೆ ನೂತನೂತನಾ 12

ರಥದ ಸಂಭ್ರಮವಾರು ಬಲ್ಲರು
ಪ್ರತಿಗಾಣೆ ಈ ಪೃಥ್ವಿಯೊಳಗೆ ಅ
ಪ್ರತಿ ಸಾಹಸಮಲ್ಲ ತನ್ನಯ
ಸತಿಯೊಡನೆ ಪರುಠವಿಸಿ ಪೊಳೆವುತ್ತ
ಚತುರ ಬೀದಿಯ ಸುತ್ತಿ ಸುಮನಸ
ತತಿಯ ಸಂಗಡ ಬರುವ ಭರ ಉ
ನ್ನತವ ಗುಣಿಸುತ್ತ ನಲಿನಲಿದು ಅ
ಚ್ಯುತನ ಕ್ರೀಡೆಯ ಸ್ಮರಿಸಿ ನಮೋ ಎಂಬೆ13

ರಾಜರಾಜೇಶ್ವರ ನಿರಂತರ
ರಾಜಿಸುತಿಪ್ಪ ಬಗೆಬಗೆ ಸಂಪೂಜೆಯಲಿ ರಾಜೋಪಚಾರದಿ
ಮೂಜಗದೊಳು ಈ ನಿಧಿಯಲಿದ್ದ
ಸೋಜಿಗವೆ ಮತ್ತೆಲ್ಲಿಯಿಲ್ಲವು
ರಾಜಶೇಖರ ಬಲ್ಲವನೊಬ್ಬನೆ
ಮಾಜದಲೆ ಸಜ್ಜನರು ಸತ್ಕರ್ಮ
ಬೀಜಮಂದಿ ಮಾಡಿಬಿಡಲೆ 14

ದರ ಸುದರಶನ ಪಾಣಿ ತನ್ನ ಸಂ
ದರುಶನವೆಮಗಿತ್ತು ಘನ ಆ
ದರ ಪಾಲಿಸಿ ಸಂಚಿತಗಾಮಿ
ಪಠಿಸಿ ಪ್ರಾರಬ್ಧವೇ ತೀರಿಸಿ
ಕರುಣದಿಂದಲಿ ದಿವ್ಯರೂಪದ
ಗುರುತು ತೋರುವ ಅಂತರಂಗದಿ
ಪರಮಪಾವನ ವಿಜಯವಿಠ್ಠಲ
ಪೊರೆವ ಪ್ರೀತಿಲಿ ಬಂದು ಮರಿಯದೆ15
*********