Showing posts with label ನಡುಮನೆಯೊಳಗೊಂದು ನಾಲ್ಕು ತೆಂಗಿನ ಮರ purandara vittala. Show all posts
Showing posts with label ನಡುಮನೆಯೊಳಗೊಂದು ನಾಲ್ಕು ತೆಂಗಿನ ಮರ purandara vittala. Show all posts

Friday, 6 December 2019

ನಡುಮನೆಯೊಳಗೊಂದು ನಾಲ್ಕು ತೆಂಗಿನ ಮರ purandara vittala

ರಾಗ ಸೌರಾಷ್ಟ್ರ ಅಟ ತಾಳ 

ನಡುಮನೆಯೊಳಗೊಂದು ನಾಲ್ಕು ತೆಂಗಿನ ಮರ, 
ಹೇ ಗಿಣಿಯೇ ಹೇ ಗಿಣಿಯೇ ||ಪ||

ಅದು ತಲೆ ಮೊದಲಿಲ್ಲದೆ ಬೆಳೆದು ಹಣ್ಣಾಯಿತು, 
ಹೇ ಗಿಣಿಯೇ ಹೇ ಗಿಣಿಯೇ ||ಅ||

ಕಾಲಿಲ್ಲದವ ಹತ್ತಿ ಕೈಯಿಲ್ಲದವ ಕೊಯ್ದ, ಹೇ ಗಿಣಿಯೇ ಹೇ ಗಿಣಿಯೇ, ಅದ
ತಲೆಯಿಲ್ಲದವ ಬಂದು ಹೊತ್ತು ತಂದಿಟ್ಟ, ಹೇ ಗಿಣಿಯೇ ಹೇ ಗಿಣಿಯೇ ||

ಕಣ್ಣಿಲ್ಲದವ ನೋಡಿ ಕೆಂಪಿನ ಹೆಣ್ಣೆಂದ, ಹೇ ಗಿಣಿಯೇ ಹೇ ಗಿಣಿಯೇ, ಅದ
ಬಾಯಿಲ್ಲದವ ತಿಂದು ಬಸಿರೊಳಂಬನೆ ಬಿಟ್ಟ, ಹೇ ಗಿಣಿಯೇ ಹೇ ಗಿಣಿಯೇ ||

ಹಾಲವೃಕ್ಷದ ಮೇಲೆ ಹಕ್ಕಿ ತಾಳಿಹುದು, ಹೇ ಗಿಣಿಯೇ ಹೇ ಗಿಣಿಯೇ, ಅದ
ಹಲಬುತ್ತ ಈರೇಳು ಜಗವ ಮೋಹಿಸುವಂತೆ, ಹೇ ಗಿಣಿಯೇ ಹೇ ಗಿಣಿಯೇ ||

ಬಲೆಯ ಹಾಕಿದರು ಬಲದಿ ದಾಟುವುದಯ್ಯ, ಹೇ ಗಿಣಿಯೇ ಹೇ ಗಿಣಿಯೇ, ಅದ
ಸಲಹುವ ಪುರಂದರ ವಿಠಲರಾಯ ಹೇ ಗಿಣಿಯೇ ಹೇ ಗಿಣಿಯೇ ||
***

pallavi

naDemaneyoLagondu nAlgu tengina mara hE giNiyE hE giNiyE

anupallavi

adu tale modalillade beLedu haNNayitu hE giNIyE hE giNiyE

caraNam 1

kAlilladava hatti kaiyilladava koida hE giNIyE hE giNIyE ada
taleyilladava bandu hottu tandiTTa hE giNIyE hE giNiyE

caraNam 2

kaNNIlladava nODi kempina heNNenda hE giNIyE hE giNiyE ada
bAyilladava tindu basiroLambane biTTa hE giNiyE hE giNiyE

caraNam 3

hAla vrSda mEle hakki tALihudu hE giNiyE hE giNiyE ada
halabutta IrELu jagava mOhisuvante hE giNiyE hE giNiyE

caraNam 4

baleya hAkidaru baladi dATuvudayya hE giNiyE hE giNiyE ada
salahuva purandra viTTalarAya hE giNIyE hE giNIyE
***

ಪುರಂದರದಾಸರು
ನಡುಮನೆಯೊಳಗೊಂದು ನಾಲ್ಕು ತೆಂಗಿನಮರ -ಹೇ ಗಿಣಿ - ಹೇ ಗಿಣಿಯೇ |ಕಡೆಮೊದಲಿಲ್ಲದೆ ಅದುಕಾತು ಹಣ್ಣಾಯ್ತ - ಹೇಗಿಣಿ ಪ.

ಕಾಲಿಲ್ಲದವ ಹತ್ತಿ ಕೈಯಿಲ್ಲದವ ಕೊಯ್ದ - ಹೇ ಗಿಣಿತಲೆಯೆಲ್ಲದವ ಬಂದು ಹೊತ್ತು ಕೊಂಡುಹೋದ - ಹೇ ಗಿಣಿ 1

ಕಣ್ಣಿಲ್ಲದವ ನೋಡಿ ಕೆಂಪಿನ ಹಣ್ಣೆಂದ - ಹೇ ಗಿಣಿಬಾಯಿಲ್ಲದವ ನುಂಗಿ ಬಸಿರೊಳಗಿಂಬಿಟ್ಟ - ಹೇ ಗಿಣಿ 2

ಬಲೆಯ ಹಾಕಿದರು ಬಲೆಯದಾಟುವದಯ್ಯ - ಹೇ ಗಿಣಿಚೆಲುವ ಪುರಂದರವಿಠಲನೇ ಬಲ್ಲ - ಹೇ ಗಿಣಿ 3
***