Showing posts with label ಕಲಿರಾಯ ಬಂದಿಹ ಕಲಿಯುಗದೊಳಗೆ ಬಲಿ ತೋರುವೆನೆನುತಲಿ hanumesha vittala. Show all posts
Showing posts with label ಕಲಿರಾಯ ಬಂದಿಹ ಕಲಿಯುಗದೊಳಗೆ ಬಲಿ ತೋರುವೆನೆನುತಲಿ hanumesha vittala. Show all posts

Tuesday, 1 June 2021

ಕಲಿರಾಯ ಬಂದಿಹ ಕಲಿಯುಗದೊಳಗೆ ಬಲಿ ತೋರುವೆನೆನುತಲಿ ankita hanumesha vittala

 ಕಲಿರಾಯ ಬಂದಿಹ ಕಲಿಯುಗದೊಳಗೆ ಬಲಿ ತೋರುವೆನೆನುತಲಿ ಪ


ಯುಗತ್ರಯದಿ ಬಗೆ ಬಗೆ ಕಷ್ಯವ ಪಡುತಾ ಕೋ

ಡಗನಂದದಿ ತನ್ಹ್ನಾಗೆಗಳಾ ಜೈಸದೆ ಅಡವಿಯೊಳಿರುತಾ

ಯುಗ ನಾಲ್ಕವು ಬರಲು ಜಿಗಿಯುತ ಪಲ್ಗಳ ತೆಗೆಯುತ ತನ್ನಯ

ಅಗಣಿತ ಮಹಿಮೆಯ ತೋರುವೆನೆನುತಲಿ 1


ಸತ್ಯ ಸೇರಿತು ಸತ್ಯಲೋಕವನು ನಿತ್ಯಕರ್ಮವು ತಾ

ಹತ್ತಿತು ಸೂರ್ಯನ ವರ ರಥವನ್ನು

ದೈತ್ಯನಾರ್ಭಟಕೆ ಶಾಸ್ತ್ರ ಹಾರಿ ಅಂತರದಲಿ ನೀಂತಿತು

ಉತ್ತವು ಕ್ಷಾರಾಣವೃತಪ್ಪಾಯಿತು (?) 2


ಸ್ನಾನವು ಮನಿಯಲಿ ಅಡಗೀತು

ಮೌನ ಜಪ ತಪಗಳು ಹಾನಿಯಾದವು

ಕಾನನದೋಳು ನಿಂತು ಅನುಮಾನವು ಹೆಚ್ಚಿತು

ದೀನನಾಥಮ್ಮಾ ಹನುಮೇಶವಿಠಲನ 3

****