ಲಾಲಿ ಪಾವನ ಚರಣ ಲಾಲಿ ಅಘಹರಣ
ಲಾಲಿ ವೆಂಕಟರಮಣ ಲಲಿತ ಕಲ್ಯಾಣ ।।ಪ॥
ವನಜಾಕ್ಷ ಮಾಧವ ವಸುದೇವ ತನಯ
ಸನಕಾದಿ ಮುನಿವಂದ್ಯ ಸಾಧುಜನಪ್ರಿಯ
ಇನಕೋಟಿಶತತೇಜ ಮುನಿಕಲ್ಪ ಭೂಜ
ಕನಕಾದ್ರಿ ನಿಲಯ ವೆಂಕಟರಾಯ ಜಜೀಯ ।।೧।।
ಜಗದೇಕನಾಯಕ ಜಲಜದಳನೇತ್ರ
ಖಗರಾಜ ವಾಹನ ಕಲ್ಯಾಣ ಚರಿತ
ಸಗರತನಯಾರ್ಚಿತ ಸನಕಾದಿ ವಿನುತ
ರಘುವಂಶಕುತಿಲಕ ರಮಣೀಯಗಾತ್ರ ।।೨।।
ನಂದಗೋಪ ಕುಮಾರ ನವನೀತ ಚೋರ
ಮಂದಾಕಿನೀ ಜನಕ ಮೋಹನಾಕಾರ
ಇಂದುಧರಸತಿ ವಿನುತ ವಿಶ್ವಸಂಚಾರ
ನಂದಗೋವಿಂದ ಮುಚುಕುಂದ ನುತಸಾರ ।।೩।।
ಪಕ್ಷಿವಾಹನ ವಿಷ್ಣುಪಾಹಿ ಪರಮೇಶ
ರಕ್ಷ ಕೌಸ್ತುಭಭೂಷ ವೈಕುಂಠವಾಸ
ಅಕ್ಷಯ ಫಲದಾಟ ಅಖಿಳ ಲೋಕೇಶ
ಲಕ್ಷಣ ಪರಿಪೂರ್ಣ ಲಕ್ಷ್ಮಿಪ್ರಾಣೇಶ ।।೪।।
ನರಮೃಗಾಕಾರಿ ಹಿರಣ್ಯಕ ವೈರಿ
ಕರಿರಾಜ ರಕ್ಷಕ ಕಾರುಣ್ಯಮೂರ್ತಿ
ಹರಿ ಆದಿಕೇಶವ ಗುರು ಅಪ್ರಮೇಯ
ಶ್ರೀಧರ ಶೇಷಗಿರಿ ವರ ತಿಮ್ಮರಾಯ ।।೫।।
****
ರಾಗ ಆನಂದಭೈರವಿ ತಾಳ ಆಟ (raga, taala may differ in audio)
Lali pavana charana lali agaharana
Lali venkataramana lalita kalyana ||pa||
Vanajaksha madhava vasudeva tanaya
Sanakadi munivamdya sadhujanapriya
Inakotisatateja munikalpa buja
Kanakadri nilaya vemkataraya jajiya ||1||
Jagadekanayaka jalajadalanetra
Kagaraja vahana kalyana carita
Sagaratanayarchita sanakadi vinuta
Raguvamsakutilaka ramaniyagatra ||2||
Nandagopa kumara navanita cora
Mandakini janaka mohanakara
Indudharasati vinuta visvasanchara
Nandagovinda mucukunda nutasara ||3||
Pakshivahana vishnupahi paramesa
Raksha kaustubabusha vaikunthavasa
Akshaya paladata akila lokesa
Lakshana paripurna lakshmipranesa ||4||
Naramrugakari hiranyaka vairi
Kariraja rakshaka karunyamurti
Hari adikesava guru aprameya
Sridhara seshagiri vara timmaraya ||5||
***