Showing posts with label ರಾಘವೇಂದ್ರ ಗುರು ದಯಮಾಡೊ ಅನುರಾಗದಲೆನ್ನನು ಕಾಪಾಡೊ nagashayana. Show all posts
Showing posts with label ರಾಘವೇಂದ್ರ ಗುರು ದಯಮಾಡೊ ಅನುರಾಗದಲೆನ್ನನು ಕಾಪಾಡೊ nagashayana. Show all posts

Monday, 6 September 2021

ರಾಘವೇಂದ್ರ ಗುರು ದಯಮಾಡೊ ಅನುರಾಗದಲೆನ್ನನು ಕಾಪಾಡೊ ankita nagashayana

 ankita ನಾಗೇಶಶಯನ 

ರಾಗ: ಧನ್ಯಾಸಿ ತಾಳ: ಆದಿ


ರಾಘವೇಂದ್ರ ಗುರು ದಯಮಾಡೊ ಅನು-

ರಾಗದಲೆನ್ನನು ಕಾಪಾಡೊ


ಭಾಗವತರ ಸತ್ಸಂಗವ ನೀಡೊ

ಯೋಗಿವರ್ಯ ಎನ್ನ ಅಘಗಳ ದೂಡೊ ಅ.ಪ


ವರಮಂತ್ರಾಲಯ ವರಹಜೆತಟದಲ್ಲಿ

ಪರಿಶೋಭಿಸುತಿಹ ಸುರಧೇನು

ಹರಿಗುರುಭಕುತರ ಕರೆದುವರವನೀವ

ಪರಮಕರುಣಿ ಸುರಕಲ್ಪತರು 1

ಕನಕಕಶ್ಯಪನಲಿ ಕಂದನಾಗಿ ನೀ-

ಜನಿಸುತೆ ಹರಿಯನು ಜಪಿಸುತಿರೆ

ಜನಕನು ಕೋಪದಿಂ ಹರಿಯೆಲ್ಲಿಹನೆನೆ

ಘನಕಂಬದಲಿ ತೋರಿದ ಗುರುವೆ 2

ಬಾಲಕತನದಲಿ ಬಾಲಶ್ರೀಕೃಷ್ಣನ

ಲೀಲೆಯಿಂ ಕುಣಿಸಿದ ವ್ಯಾಸಯತಿ

ಮಾಯಿಗಳನೆ ಗೆದ್ದು ತಾತ್ಪರ್ಯ ಚಂದ್ರಿಕ

ನ್ಯಾಯಾಮೃತ ತರ್ಕತಾಂಡವ ರಚಿಸಿದ 3

ತಂತ್ರದೀಪಿಕ ಮಂತ್ರಾರ್ಥಮಂಜರಿ

ತತ್ತ್ವಮಂಜರಿ ನ್ಯಾಯಮುಕ್ತಾವಳಿ

ಹತ್ತುಮೂವತ್ತೇಳು ಗ್ರಂಥಗಳ ರಚಿಸಿ

ಉತ್ತಮ ಪರಿಮಳಬೀರಿದ ಸದ್ಗುರು 4

ಭಾಗವಾತಾಗ್ರಣಿ ಭಕ್ತಚಿಂತಾಮಣಿ

ತ್ಯಾಗಿ ಸುಗುಣಖಣಿ ವಿದ್ವನ್ಮಣಿ

ಯೋಗಿ ಶ್ರೀಮಧ್ವರ ದಾಸಶಿರೋಮಣಿ

ನಾಗೇಶಶಯನನ ತೋರಿಸು ಕರುಣಿ 5

***