Showing posts with label ರಾಜನ ಭಾಗ್ಯವಿದು ಧರ್ಮರಾಜನ ಭಾಗ್ಯವಿದು prasannashreenivasa. Show all posts
Showing posts with label ರಾಜನ ಭಾಗ್ಯವಿದು ಧರ್ಮರಾಜನ ಭಾಗ್ಯವಿದು prasannashreenivasa. Show all posts

Thursday 5 August 2021

ರಾಜನ ಭಾಗ್ಯವಿದು ಧರ್ಮರಾಜನ ಭಾಗ್ಯವಿದು ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ರಾಜಸೂಯಾ ಅಗ್ರಪೂಜಾ ಸ್ತೋತ್ರ


ರಾಜನ ಭಾಗ್ಯವಿದು | ಧರ್ಮರಾಜನ ಭಾಗ್ಯವಿದು ಪ


ರಾಜೀವ ಜಾಂಡದ ಏಕಸ್ವರಾಟ್ ಶ್ರೀ

ಕೃಷ್ಣನ ರಾಜೀವ ಅಂಘ್ರಿ ಸುಯುಗ್ಮವ

ರಾಜಸೂಯದಿ ತಾ ಪೂಜಿಸಿದ ಅ.ಪ

ಚಿತ್ರವಿಚಿತ್ರವು ಸ್ತಂಭತೋರಣಗಳು

ರತ್ನ ಮಾಣಿಕ್ಯ ಮರುಗದದಿ

ಚಂದ ಹೊಳೆವ ಸಭೆ ರಾಜರು ಸುತಪೋ

ಧನರು ಕುಳಿತಿರೆ ಮಾಧವಗೆ

ಮೊದಲು ಪೂಜೆಯ ಮಾಡಿ ಯಜ್ಞವಾ

ಚರಿಸಿದ ವಿಧಿ ಪೂರ್ವಕದಿ ಶ್ರಧ್ಧೆಯಲಿ 1

ಶಂತನುಸುತ ಗಾಂಗೇಯರು ನೆರೆದಿದ್ದ

ಸಾಧು ಸನ್ಮುನಿಜನ ಮನದಂತೆ

ಇಂದಿರೆಯರಸ ಶ್ರೀ ಕೃಷ್ಣಗೆ ಸಮರು

ಅಧಿಕರು ಇಲ್ಲದ ಜಗದೀಶ

ವಿಧಿ ಈಶಾನದಿ ಸರ್ವನಿಯಾಮಕ

ಕೃಷ್ಣನೇ ಪೂಜ್ಯನು ಎಂದರು ದೃಢದಿ 2

ಗಂಗಾಜಲವ ಜಾಂಬೂನದ ಕಲಶದಿ

ಮಾದ್ರೇಯನು ತಾ ತಂದೀಯೇ

ಗಂಗಾಜನಕ ವರಾಂಗಿ ಸುವಕ್ಷ ಐ

ಶಂಗವಾಸನ ಅರಿಶಂಖವ ಪಿಡಿದವನ

ಅಂಘ್ರಿ ಸುಕಂಜದ್ವಯವ ಯುದಿಷ್ಠಿರ

ಅವನೀಜನಗೈದ ಭಕ್ತಿಯಲಿ 3

ಮನುಷ್ಯವತ್ ಲೀಲಾ ದ್ವಿಭುಜನು ಚಿನ್ಮಯ

ಭಜಕಗೆ ಚತುರ್ಭುಜ ಕಾಣಿಸುವ

ಜ್ಞಾನರೂಪದಿ ಹರಿ ವನಜ ಸಂಭವನಲಿ

ಇಹ ಕ್ರಿಯಾರೂಪದಿ ವಾಯುನಲಿ

ವಾಣೀ ಭಾರತಿಯಲಿ ಇಚ್ಚಾಶಕ್ತಿ

ರೂಪದಿ ಪ್ರಚುರನು ಸರ್ವೇಶ 4

ರಥನಾಭಿಯಲಿ ಅರಗಳ ತೆರದಿ

ಸಮಸ್ತವು ಪ್ರತಿಷ್ಠಿತ ವಾಯುನಲಿ

ಕ್ಷಿತಿಯಲಿ ಸ್ವಯಮೇವ ವಾಯುವೆ

ಜನಿಸಿ ಜಗದಂತರಾತ್ಮ ಭೀಮನಾಗಿ

ಯುಧಿಷ್ಠಿರನಲಿ ಸಮಾಭಿಷ್ಟನಾಗಿಹ ಸೌಮ್ಯ

ರೂಪದಿ ಕೃಷ್ಣನ ಸೇವಿಸಲು 5

ಸೌಮ್ಯರೂಪದಿ ಒಳಗಿದ್ದು ಶ್ರೀ ಕೃಷ್ಣಗೆ

ಅಗ್ರ ಪೂಜಾದಿ ರಾಜಸೂಯ

ತಾ ಮಾಡಿ ಸ್ವಯಂ ತನ್ನ ಅವತಾರ

ಭೀಮಗೆ ಅಣ್ಣನೆಂದೆನಿಸುತಿಪ್ಪ

ಧರ್ಮರಾಜನ ಕೈಯಿಂದ ಮಾಡಿಸಿದನು

ಭಕ್ತಾನುಕಂಪಿ ಶ್ರೀಹರಿಯ ಪ್ರೀತಿಸಿದ 6

ಮನಶುಚಿಯಲಿ ಈ ನುಡಿಗಳ ಪಠಿಸುವ

ಶ್ರವಣವ ಮಾಡುವ ಸುಜನರಿಗೆ

ವನರುಹಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸ

ಪಾಂಡವ ಪ್ರಿಯ ಶ್ರೀ ರುಕ್ಮಿಣೀಶ

ಮನಶೋಕಾದಿ ತಾಪತ್ರಯ ನೀಗಿಸಿ

ಯೋಗ್ಯವಾಂಛಿತವೀವ ಬಹುದಯದಿ 7

***