ದಯಾಪೂರ್ಣ ಗುಣನಿಧಿಯೆ ದೀನರಕ್ಷಕನೆಂದು ಭಯದಿಂದ
ನಂಬಿದೆನೊ ರಂಗ
ಕೈವಿಡಿದು ಕಾಯದಿಹುದು ನಿನಗುಚಿತವೆ ಭಯರಹಿತ
ಗೋವಿಂದ ರಂಗ ಪ.
ಇಳೆಸೃಷ್ಟಿಗಾಧಾರನೆಂಬ ಬಿರುದುಳ್ಳಡೆ ಜಗನ್ಮಯನೆ ಚಿನ್ಮಯರೂಪ ರಂಗ
ಪ್ರಿಯದಿಂದ ಭಜಿಸುವರ ಭಕ್ತವತ್ಸಲ ಏಕೋದೇವ
ನೀನಾದ್ಯಯ್ಯ ರಂಗ 1
ಸುಜನಮಂದಾರ ಸರಸಿಜಭವಪಿತ ನಿನ್ನ ಪ್ರಜೆಗಳು ಪೊಗಳುತ್ತಿಹರೆ ರಂಗ
ನಿಜವಾಗಿ ನೆನೆವರ ಹೃದಯಹೃತ್ಕಮಲ ಮನಸಿಜ ಜನಕ
ಮುರಹರನೆ ರಂಗ 2
ಸುಜನರೊಳಗೆನ್ನ ಕುಹಕವ ಮಾಡದೆ ನಿನ್ನ ಭಜಕನೆಂದಿರಲಾಗಿ ರಂಗ
ಧರೆಯೊಳಗೆ ಹೆಳವನಕಟ್ಟೆಯಲಿ ನೆಲಸಿ
ಪರಿಪೂರ್ಣಕಳೆಯಿಂದ ಭಕುತರನು ಒಲಿಸಿ
ಸ್ಥಿರವಾಗಿ ಪೂಜೆಯನು ನೆಲಸಿ ನೀನಿಂದೆ
ಕರುಣ ದೃಷ್ಟಿಯಲಿ ಭಕ್ತರನು ಮನ್ನಿಸುವೆ 1
ಹತ್ತು ಅವತಾರದಲಿ ಇದಿರಾಂತವರ ಗೆಲಿದು
ಮತ್ತೆ ಪದವಿಯ ಕೊಟ್ಟುರಕ್ಷಿಸಿ ಕಾಯ್ದೆ
ವಿಸ್ತರಿಸಿ ಪೂಜೆಯನು ಮಾಡಿಸಿಕೊಂಬೆ
ತೆತ್ತೀಸಕೋಟಿ ದೇವರ್ಕಳನು ರಕ್ಷಿಸಿದೆ 2
ಉದಯ ಮದ್ಯಾಹ್ನ ಸಂಜೆಯಲಿ ಪೂಜೆಯನು
ವಿಧವರಿತು ಸೇವೆಯನು ಅನುಸರಿಸಿಕೊಂಬೆ ಸ-
ಹೃದಯ ಭಕ್ತರನು ಕಾಯ್ದು ಪಾಲಿಸುವೆ
ಮುದದಿಂದ ಹೆಳವನಕಟ್ಟೆಯಲಿ ನೆಲಸಿರುವೆ 3
****