ಯಥಾದೇವೊ ತಥಾ ಗುರೌ ಶ್ರುತಿ ಹೇಳಿದ ಸನ್ಮತಲಿರ್ಯೊ ಪ
ವೃಥಾ ಅಭಾವ ನೀ ಹಿಡುವರೆ ಸ್ವತ:ಸಿದ್ಧವ ತಾಂ ಬಿಡುವರೆ ಸತ್ಸಂಗದಲಿ ನೋಡಿನ್ನಾರೆ ಚಿತ್ಸುಖ ಹೊಳೆವರು ಕಣ್ಣಾರೆ 1
ಮುಗಿಲಿಗೆ ಮತ್ತೆ ಮುಗಿಲುಂಟೆ ಹಗಲಿಗೆ ಹಗಲಾಗುದುಂಟೆ ಜಗ ಇಹುದಕೆ ಜಗಮುಂಟೆ ಹೀಗಾದ ಮ್ಯಾಲೆ ವಸ್ತು ಎರಡುಂಟೆ 2
ಅನುಭವಕಿದರಿಟ್ಟು ಬಾಹುದು ಖೂನ ಹೇಳವ್ಯಾವು ನೋಡು ವೇದ ದೀನ ಮಹಿಪತಿಗಿದೆ ಬೋಧ ಭಾನುಕೋಟಿತೇಜನೊಂದೇ ತಾನಾದ 3
***