Showing posts with label ಪ್ರಳಯೋದಕದಲ್ಲಿ purandara vittala ankita suladi ಸೃಷ್ಟಿಪ್ರಕರಣ ಸುಳಾದಿ PRALAYALOKADALLI SRUSHTI PRAKARANA SULADI. Show all posts
Showing posts with label ಪ್ರಳಯೋದಕದಲ್ಲಿ purandara vittala ankita suladi ಸೃಷ್ಟಿಪ್ರಕರಣ ಸುಳಾದಿ PRALAYALOKADALLI SRUSHTI PRAKARANA SULADI. Show all posts

Thursday, 29 April 2021

ಪ್ರಳಯೋದಕದಲ್ಲಿ purandara vittala ankita suladi ಸೃಷ್ಟಿಪ್ರಕರಣ ಸುಳಾದಿ PRALAYALOKADALLI SRUSHTI PRAKARANA SULADI

1st Audio by Mrs. Nandini Sripad


2nd Audio by Vidwan Sumukh Moudgalya



1. ಶ್ರೀಪುರಂದರದಾಸಾರ್ಯ ವಿರಚಿತ ಸಂಕ್ಷಿಪ್ತ ಸೃಷ್ಟಿಪ್ರಕರಣ ಸುಳಾದಿ 


 ರಾಗ ಭೈರವಿ 


 ಧ್ರುವತಾಳ 


ಪ್ರಳಯೋದಕದಲ್ಲಿ ವಟಪತ್ರಶಯನನಾಗಿದ್ದ

ಕಾಲದಲ್ಲಿ ಶ್ರೀದೇವಿಯರು

ಶ್ರೀ ಭೂ ದುರ್ಗಾ ರೂಪದಿ ನಿಂದು

ದಕ್ಷಣಾಯಜ್ಞ ನಾಮದಿಂದ ವೇದಗಳಿಂದ

ಕೊಂಡಾಡುವ ಮುಖ್ಯಾಭಿಮಾನಿಯಾಗಿ

ವರ್ಣಾತ್ಮಕದಿಂದ ನಿತ್ಯ ನಿಗಮಾರ್ಥಗಳಿಂದ

ತುತಿಸುವಳು ಆ ಆ ಆ ತ್ರಿಪ್ರಕಾರ

ಮಿತಿಯೆಂದು ಬೊಮ್ಮನ ನೂರರೊಳೆಂಟುಭಾಗ -

ದೊಳೊಂದು ಭಾಗವೀ ಲಕುಮಿದೇವಿಗೆ

ತಾ ಪ್ರೇರಿಸಲಾಗಿ ತುತಿಸುವಂದದಿ

ಪ್ರೇರಕನಾಗಿ ಪ್ರಾರ್ಥನೆ ಕೈಕೊಂಡು

ತಮ ತಮ್ಮ ಸಾಧನಗಳು ಮಾಡಿಕೊಂಬಲ್ಲಿ

ನಿರೂಪಿಸಿದನು ಪುರಂದರವಿಟ್ಠಲ್ಲ  ॥ 1 ॥ 


 ಮಟ್ಟತಾಳ 


ನೂರು ವರುಷವು ಯಿಂದಾಯಿತೆನಲು

ಉದಯಕಾಲದಿ ಚತುರ್ದಶ ಭುವನಾತ್ಮಕವಾದ

ಕಮಲದಲ್ಲಿ ಚತುರ್ಮುಖ ಬೊಮ್ಮನ ಪಡದೆ ನೀನು

ಒಮ್ಮೆ ಬಂದು ನಿನ್ನ ಪ್ರಳಯೋದಕವನು

ಥೆರೆಗಳ ನೋಡಿ ಯೇನು ಕಾಣದೆ ಪೊಕ್ಕುನಾಳದಲ್ಲಿ

ಮತ್ತೊಮ್ಮೆ ಬರಲು ನಿನ್ನ ಘೋರವಾದ

ನಿನ್ನ ರೂಪವು ಕಂಡು ಅಂಜಿ ಮತ್ತೆ

ನಿನ್ನ ಮನವೇನೆಂದು ಬಂದದ ಕಂಡು ಉದರಪ್ರವೇಶವಾದ

ಒಂದು ಭಯವು ಎರಡು ಅಜ್ಞಾನವು

ನಿನ್ನ ವಿಷಯದಲಿ ಉಂಟಾದಡಾಗಲಿ

ಕಂತುಜನಕ ನೀನೆ ತಪತಪವೆನಲಾಗ

ತಪವನು ಮಾಡಿದ ಪುರಂದರವಿಟ್ಠಲನ್ನ 

ಒಲಿಸಿ ಸೃಷ್ಟಿಯ ಮಾಡಿದ ಸರಸಿಜ ಸಂಭವನು ॥ 2 ॥ 


 ರೂಪಕತಾಳ 


ಸೂಕ್ಷ್ಮರೂಪವಾದ ಯಿಪ್ಪತ್ತುನಾಲ್ಕು ತತ್ವಗಳ

ಹೊರಗೆ ಪಂಚಭೂತಗಳಿಗಭಿಮಾನಿಯಾದ

ಗಣೇಶ ಮೊದಲಾದ ಪಂಚಭೂತಗಳ ಸೃಜಿಸಿದನಾಗ

ಒಂದೊಂದು ವರ್ಣದ ಅಭಿಮಾನಿಗಳಿಂದ

ಮಹತತ್ವಕೀಶ ಅಹಂಕಾರಧೀಶನೆಂದು

ಬೊಮ್ಮಾಂಡವ ನಿರ್ಮಾಣವ ಮಾಡಿ

ಪೂರ್ವದಂತೆ ಆ ದೇವತೆಗಳ ಸೃಜಿಸಿ

ಬೊಮ್ಮಾಂಡವಾಧಾರವಾಗಿ ತನ್ನ

ದೇಹವ ಬೆಳಸಿದ ಚತುರ್ಮುಖನಾಗ

ಮೂಲರೂಪದಿಂದ ಪುರಂದರವಿಟ್ಠಲ ವಿ -

ರಾಟದಲ್ಲಿ ವಾಸವಾಗಿ ನಿಂದ ಜಗದಾಧಾರ ॥ 3 ॥ 


 ಝಂಪಿತಾಳ 


ಹಳೆಯ ಬೊಮ್ಮಗ ಅಂದು ಅವ್ಯಾಕೃತದಲ್ಲಿ ವಿರಜೆಯಲಿ

ಮುಳುಗಿಸಿ ಉದರದಲ್ಲಿ ಪ್ರವೇಶ ಬೊಮ್ಮಾದಿ -

ಗಳು ಯಿರಲು ಕೆಲವು ಲೋಕಂಗಳು ಸೃಷ್ಟಿಯಾದ

ಬಳಿಕ ಶ್ವೇತದ್ವೀಪದಲಿ ಯಿದ್ದ ಮೂರುತಿಯ

ದರುಶನದಿ ಮುಕುತರೆನಿಸಿಕೊಂಡು ಐದಿದರು

 ಪುರಂದರವಿಟ್ಠಲನ್ನ ಚರಣ ಕಮಲವ ॥ 4 ॥ 


 ತ್ರಿವಿಡಿತಾಳ 


ಗಣನೆಯಿಲ್ಲದ ಅಪಾರ ರೂಪಂಗಳಲ್ಲಿ

ಒಂದು ರೂಪದಿ ಚತುರ್ಮುಖನಿಗೆ

ಸರ್ವಾಂಗ ಸಾಯುಜ್ಯವಿತ್ತ

ಮಂಗಳಾಂಗನು ಸಾಯುಜ್ಯವಿತ್ತ

 ಪುರಂದರವಿಟ್ಠಲ ಭಕುತರೊಡಿಯ ನೀನು

ಭಕುತರಧಿಪ ನೀನು ಸಾಯುಜ್ಯವಿತ್ತ ॥ 5 ॥ 


 ಅಟ್ಟತಾಳ 


ಶ್ವೇತದ್ವೇಪವು ಸುತ್ತಿದ ಉದಕವು

ಬಯಲಾದ ಮೇಲೆ ಅಂಧಂತಮಸು

ಏಳುಕೋಟಿ ಪರಿಮಿತವಾದ ನರಕವು

ಶುಕ್ಲ ಶೋಣಿತ ಮೂತ್ರ ಅಶುದ್ಧದಿಂದ

ಮಿಶ್ರವಾದ ತಮಸಿನೊಳು ಪೂರ್ಣಸಾಧನವನು

ಮಾಡಿದ ಜನರಿಗೆ ಹರಿದ್ವೇಷ ಭಕ್ತರಲ್ಲಿ

ಅನಾದಿಕಾಲದಿ ಮಾಡಿ ದುಃಖಭಾಜನರಾದ

ಪಾಪಿಜೀವರನು ವಾಯುಭೃತ್ಯರಿಂದ ಪ್ರೇರಿಸ -

ಲಾಗ ಲಿಂಗಶರೀರವ ಹೋಳು ಮಾಡಿ

ಕೆಡಹಿತು ಅಂಧಂತಮಸಿನೊಳು

ಕ್ರಿಮಿ ಪಕ್ಷಿಗಳಿಂದ ಬಾಧೆಯಿಲ್ಲದೆ ಮೇಲೆ

ಪರ್ವತಂಗಳ ತಂದು ಬಿಸುಟುವರು

ಭೀಮನ ದೂತರಿಂದ ನೊಂದು

ದುಃಖಭಾಜನರಾದ ಪಾಪಿ ಜೀವರಿಗೆ

ಎಂತು ಮಾಡಿದದರಂಥ ಫಲವೀವ

ಕಂತುಜನಕ ಪುರಂದರವಿಟ್ಠಲರೇಯ ॥ 6 ॥ 


 ಆದಿತಾಳ 


ಇಂತು ಪ್ರಕೃತಿ ಸಮ್ಮಂಧವಾದಡೆ

ಬೊಮ್ಮ ರುದ್ರ ಯಿಂದ್ರ ದಿಕ್ಪಾಲಕರು ಮತ್ತೆ

ದೇವತೆಗಳು ಮನು ಮುನಿಗಳು ಶ -

ರೀರದಲಿ ವಾಸವಾಗಿ ಪುರಂದರವಿಟ್ಠಲ 

ಸೃಷ್ಟಿ ಸ್ಥಿತಿ ಲಯಕೆ ಕಾರಣ ॥ 7 ॥ 


 ಜತೆ 


ಕರ್ಮಜಾಂಡಗಳ ಮರ್ಮಗಳ ತಿಳಿದು ಫಲವೀವ

ನಿರ್ಮಲ ಚರಿತ್ರ ಪುರಂದರವಿಟ್ಠಲ ॥

*****


2.ಶ್ರೀ ಪುರಂದರದಾಸಾರ್ಯ ವಿರಚಿತ  ಸೃಷ್ಟಿ - ಪ್ರಕರಣ ಸುಳಾದಿ - ೧ 


 ರಾಗ : ಭೈರವಿ 


 ಧೃವತಾಳ 


ಪ್ರಳಯೋದಕದಲ್ಲಿ ವಟ ಪತ್ರ ಶಯನನಾಗಿದ್ದ ಕಾಲದಲ್ಲಿ

ಶ್ರೀದೇವಿಯರು ಶ್ರೀ ಭೂದುರ್ಗಾ ರೂಪದಿ ನಿಂದು

ದಕ್ಷಣಾ ಯಜ್ಞ ನಾಮದಿಂದ ವೇದಂಗಳಿಂದ

ಕೊಂಡಾಡುವ ಮುಖ್ಯಾಭಿಮಾನಿಯಾಗಿ

ವರ್ಣಾತ್ಮಕವಾದ ನಿತ್ಯ ನಿಗಮಾರ್ಥಗಳಿಂದ

ತುತಿಸುವಳು ಆ ಆ ಆ ತ್ರಿ ಪ್ರಕಾರ

ಮಿತಿಯೆಂದು ಬೊಮ್ಮನ ನರರೊಳೆಂಟು ಭಾಗ-

ದೊಳೊಂದು ಭಾಗವೀ ಲಕುಮಿದೇವಿಗೆ ತಾ ಪ್ರೇರಿಸಲಾಗಿ

ತುತಿಸುವಂದದಿ ಪ್ರೇರಕನಾಗಿ ಪ್ರಾರ್ಥನೆ ಕೈಕೊಂಡು

ತಮ ತಮ್ಮ ಸಾಧನಗಳು ಮಾಡಿಕೊಂಬಲ್ಲಿ

ನಿರೂಪಿಸಿದನು ಪುರಂದರವಿಠಲ ॥೧॥


 ಮಟ್ಟತಾಳ 


ನೂರು ವರುಷವು ಇಂದಾಯಿತೆನಲು

ಉದಯಕಾಲದಿ ಚತುರ್ದಶ ಭುವನಾತ್ಮಕವಾದ

ಚತುರ್ಮುಖ ಬೊಮ್ಮನ ಪಡೆದೆ ನೀನು

ಒಮ್ಮೆ ಬಂದು ನಿನ್ನ ಪ್ರಳಯೋದಕವನು

ಥೆರೆಗಳ ನೋಡಿ ಏನುಕಾಣದೆ ಪೊಕ್ಕು ನಾಳದಲ್ಲಿ

ಮತ್ತೊಮ್ಮೆ ಬರಲು ನಿನ್ನ ಘೋರವಾದ

ನಿನ್ನ ರೂಪವು ಕಂಡು ಅಂಜಿ ಮತ್ತೆ

ನನ್ನ ಮನವೇನೆಂದು ಬಂದದುಕಂಡು ಉದರಪ್ರವೇಶವಾದ ಒಂದು

ಭಯವು ಎರಡು ಅಜ್ಞಾನವು

ನಿನ್ನ ವಿಷಯದಲ್ಲಿ ಉಂಟಾದಡಾಗಲಿ

ಕಂತು ಜನಕ ನೀನೆ ತಪತಪವೆನಲಾಗ

ತಪವನು ಮಾಡಿದ ಪುರಂದರವಿಠಲನ್ನ 

ಒಲಿಸಿ ಸೃಷ್ಟಿಯ ಮಾಡಿದ ಸರಸಿಜಸಂಭವನು ॥೨॥


 ರೂಪಕತಾಳ 


ಸೂಕ್ಷ್ಮ ರೂಪವಾದ ಇಪ್ಪತ್ತುನಾಲ್ಕು ತತ್ವಗಳ ಹೊರಗೆ

ಪಂಚಭೂತಗಳಿಗಭಿಮಾನಿಯಾದ

ಗಣೇಶ ಮೊದಲಾದ ಪಂಚ ಭೂತಗಳ ಸೃಜಿಸಿದನಾಗ

ಒಂದೊಂದಾವರಣದ ಅಭಿಮಾನಿಗಳಿಂದ

ಮಹತತ್ವಕೀಶ ಅಹಂಕಾರಧೀಶನೆಂದು

ಬೊಮ್ಮಾಂಡವ ನಿರ್ಮಾಣವ ಮಾಡಿ

ಪೂರ್ವದಂತೆ ಆ ದೇವತೆಗಳ ಸೃಜಿಸಿ

ಬೊಮ್ಮಾಂಡವಾಧಾರವಾಗಿ ತನ್ನಾದೇಹ

ಬೆಳಸಿದ ಚತುರ್ಮುಖನಾಗ

ಮೂಲ ರೂಪದಿಂದ ಪುರಂದರವಿಠಲ ವಿ-

ರಾಟದಲ್ಲಿ ವಾಸವಾಗಿ ನಿಂದ ಜಗದಾಧಾರ ॥೩॥


 ಝಂಪೆತಾಳ 


ಹಳೆಯ ಬೊಮ್ಮಗ ಅಂದು ಅವ್ಯಾಕೃತದಲ್ಲಿ

ವಿರಜೆಯಲಿ ಮುಳಗಿಸಿ ಉದರದಲಿ ಪ್ರವೇಶ

ಬೊಮ್ಮಾದಿಗಳು ಇರಲು ಕೆಲವುಲೋಕಂಗಳು ಸೃಷ್ಟಿಯಾದ ಬಳಿಕ

ಶ್ವೇತ ದ್ವೀಪದಲ್ಲಿದ್ದ ಮೂರುತಿಯ

ದರುಶನದಿ ಮುಕುತರೆನಿಸಿಕೊಂಡು

ಐದಿದರು ಪುರಂದರವಿಠಲನ ಚರಣ ಕಮಲವ ॥೪॥


 ತ್ರಿವಿಡಿತಾಳ 


ಗಣನೆ ಇಲ್ಲದ ಅಪಾರ ರೂಪಂಗಳಲಿ

ಒಂದು ರೂಪದಿ ಚತುರ್ಮುಖನಿಗೆ

ಸರ್ವಾಂಗ ಸಾಯುಜ್ಯವಿತ್ತ

ಮಂಗಾಳಾಂಗನು ಸಾಯುಜ್ಯವಿತ್ತ

 ಪುರಂದರವಿಠಲ ಭಕುತರೊಡಿಯ ನೀನು

ಭಕುತರಧಿಪ ನೀನು ಸಾಯುಜ್ಯವಿತ್ತ ॥೫॥


 ಅಟ್ಟತಾಳ 


ಶ್ವೇತ ದ್ವೀಪವು ಸುತ್ತಿದ ಉದಕವು

ಬಯಲಾದ ಮೇಲೆ ಅಂಧತಮಸು

ಏಳು ಕೋಟಿ ಪರಿಮಿತವಾದ ನರಕವು

ಶುಕ್ಲ ಶೋಣಿತ ಮೂತ್ರ ಅಶುದ್ಧದಿಂದ

ಮಿಶ್ರವಾದ ತಮಸಿನೊಳು ಪೂರ್ಣ ಸಾಧನವನು

ಮಾಡಿದ ಜನರಿಗೆ ಹರಿದ್ವೇಷ ಭಕ್ತರಲ್ಲಿ ಅ-

ನಾದಿ ಕಾಲದಿ ಮಾಡಿ ದುಃಖ ಭಾಜನರಾದ

ಪಾಪಿ ಜೀವರನು ವಾಯು ಭೃತ್ಯರಿಂದ ಪ್ರೇರಿಸಲಾಗಿ

ಲಿಂಗ ಶರೀರವ ಹೋಳು ಮಾಡಿ

ಕೆಡಹಿತು ಅಂಧಂತಮಸಿನೊಳು

ಕ್ರಿಮಿ ಪಕ್ಷಿಗಳಿಂದ ಬಾಧೆಯಲ್ಲದೆ ಮೇಲೆ

ಪರ್ವತಂಗಳ ತಂದು ಬಿಸುಟುವರು

ಭೀಮನ ದೂತರಿಂದ ನೊಂದು

ದುಃಖಭಾಜನರಾದ ಪಾಪಿ ಜೀವರಿಗೆ

ಎಂತು ಮಾಡಿದರದರಂಥ ಫಲವೀವ

ಕಂತು ಜನಕ ಪುರಂದರವಿಠಲರೇಯ ॥೬॥


 ಆದಿತಾಳ 


ಇಂತು ಪ್ರಕೃತಿ ಸಂಬಂಧವಾದಡೆ

ಬೊಮ್ಮ ರುದ್ರ ಇಂದ್ರ ದಿಕ್ಪಾಲಕರು ಮತ್ತೆ

ದೇವತೆಗಳು ಮನು ಮುನಿಗಳು

ಶರೀರದಲಿ ವಾಸವಾಗಿ ಪುರಂದರವಿಠಲ 

ಸೃಷ್ಟಿ ಸ್ಥಿತಿ ಲಯಕೆ ಕಾರಣ ॥೭॥


 ಜತೆ 


ಕರ್ಮಜಾಂಡಗಳ ಮರ್ಮಗಳ ತಿಳಿದು ಫಲವೀವ

ನಿರ್ಮಲಚರಿತ್ರ ಪುರಂದರವಿಠಲ ॥೮॥

****