Audio by Mrs. Nandini Sripad
ಶ್ರೀ ಹುಂಡೆಕಾರ ದಾಸರಾಯರ ಕೃತಿ
(ಶ್ರೀಶವಿಠಲ ಅಂಕಿತ)
ರಾಗ ಜಂಜೂಟಿ ಆದಿತಾಳ
ರಾಘವೇಂದ್ರ ಗುರುರಾಯರಂಘ್ರಿ
ಕಮಲಾರಾಧಿಸಿರೋ ವಿಮಲಾ ॥ ಪ ॥
ಯತಿವರ ಶ್ರೀಸುಧೀಂದ್ರ ಕರಜಾತಾ ।
ಕ್ಷಿತಿ ಸುರಯತಿ ಈತ ।
ಸ್ತುತಿಪರಘ ನಿಮಿಷದೊಳು ನಿವಾರಿಸುವಾ ।
ಸುಖವನು ತೋರಿಸುವ ।
ಶ್ರುತಿಸ್ಮೃತಿ ತತಿ ಸಮ್ಮತವಾಗಿ ಗ್ರಂಥ ।
ರಚಿಸಿದ ಧೀಮಂತ ॥ 1 ॥
ಮಧ್ವ ಸುಮತ ದುಗ್ದಾಬ್ಧಿಗೆ ಉಡುರಾಜಾ ।
ತರಣಿ ಸಮತೇಜಾ ।
ಅದ್ವೈತ ಘೋರಾರಣ್ಯಕೆ ದಾವಾ ।
ಸಜ್ಜನರ ಕಾವಾ ।
ಸದ್ವೈಷ್ಣವರಿಗೆ ಸತತ ಸುಧಾಕರವಾ ।
ಕರವಿಡಿದು ಮೆರೆವಾ ।
ಉದ್ಯದ್ಭವಿ ಸಮ ಬುದ್ಧಿ ಶಾಲ್ಯನೀತಾ ।
ಜಗದೊಳಗೆ ಪ್ರಖ್ಯಾತಾ ॥ 2 ॥
ವರಹಜ ತೀರದಿ ಸ್ಥಿರದಲ್ಲಿ ನಿಂದು ।
ಕರದಲ್ಲಿಗೆ ಬಂದು ।
ಸ್ಮರಿಸುವ ಜನರಿಗೆ ಸುಖಕರನೀತಾ ।
ಮಿಥ್ಯಲ್ಲವು ಸತ್ಯಾ ।
ಕುರುಡ ಕಿವುಡ ಮೂಕರ ಮನದಭೀಷ್ಟಾ ।
ಕೊಡುವಲಿ ಬಹು ಶ್ರೇಷ್ಠ ।
ಧೊರೆ ಶ್ರೀಶವಿಟ್ಠಲನ ಶರಣಾಗ್ರಜನೀತ ।
ಸುಫಲ ಪ್ರದಾತಾ ॥ 3 ॥
***********