ಕಾಖಂಡಕಿ ಶ್ರೀ ಕೃಷ್ಣದಾಸರು
ಛೀ ಯಾತರ ಬುದ್ಧಿ | ಸೊಕ್ಕಿನ ಮಾತಿಲಿ ಬಲು ನÉೂಂದಿ ಪ
ಗುರುಹಿರಯರ ಅನುಸರಿಸದೇ | ಹರಿಚರಣವ ಕೊಂಡಾಡದೇ | ಬರಡಾ ನಾಲಿಗೆ ಮಾಡಿದಿ ಬರಿದೇ 1 ವಳ್ಹವ ಹೊಲ್ಲವರಿಯದೇ | ಯಳ್ಳಿನಿತು ನೀ ವಿಚಾರಿಸದೇ | ನಿಲ್ಲದೇ ಮಾಡುವಿ ಬಗಳುವದೇ 2
ಕೆಂಡವ ಕಂಡು ನೆರೆ | ಮಂಡಿಯಾ ತುರಿಸುವರೆ | ತುಂಡತನ ಗುಣ ಬಿಡು ಇನ್ನಾರೆ 3
ಪೊಡವಿ ದೇವತೆಯ ಕೋಣಾ | ಯಡಬಲ ನೋಡದಿರಲೇನು | ಕಡೆಯಲಿ ಕೆಡುವರು ಒಂದಿನಾ 4
ಮಹಿಪತಿಸುತ ಪ್ರಭು ದಾಸರ ಕೈ | ಅಹುದೆನಿಸಿಕೊಂಬುದೆ ಸ್ವರ್ಗಯ್ಯ | ವಿಹಿತಲ್ಲೆಂಬುದೇ ನರ್ಕದಾಶ್ರಯಾ 5
****